ನವದೆಹಲಿ: ಲಡಾಖ್‌ನ ಅದ್ಭುತ ಜನರು, ಸಂಸ್ಕೃತಿ, ಸಂಪ್ರದಾಯವು ಬಿಜೆಪಿ ಮತ್ತು ಆರ್‌ಎಸ್‌ಎಸ್ ದಾಳಿಯಲ್ಲಿ ಸಿಲುಕಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಹರಿಹಾಯ್ದರು.
ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ಸೇರಿಸಬೇಕು ಎಂದು ಒತ್ತಿ ಹೇಳಿರುವ ಅವರು, ‘ಲಡಾಖ್ ಜನರು ತಮ್ಮ ಬೇಡಿಕೆಯನ್ನು ಪ್ರತಿಪಾದಿಸಿದರಷ್ಟೆ. ನಾಲ್ವರನ್ನು ಹತ್ಯೆಗೈದು ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿತು, ಸೋನಮ್ ವಾಂಗ್ಚುಕ್ ಅವರನ್ನು ಜೈಲಿಗಟ್ಟಿತು. ಹತ್ಯೆ, ಹಿಂಸಾಚಾರ, ಬೆದರಿಕೆಯನ್ನು ನಿಲ್ಲಿಸಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೇಹ್ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
ಹಿಂಸಾಚಾರದ ಕಾರಣದಿಂದಾಗಿ ಲೇಹ್‌ನಲ್ಲಿ ಭಾನುವಾರವೂ ಕರ್ಫ್ಯೂ ಜಾರಿಯಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.