ADVERTISEMENT

ವರ್ಷಾಂತ್ಯಕ್ಕೆ ಪೂರ್ಣವಾಗದ ಲಸಿಕೀಕರಣ: ಕೇಂದ್ರದ ವಿರುದ್ಧ ರಾಹುಲ್‌‌ ಗಾಂಧಿ ಕಿಡಿ

ಪಿಟಿಐ
Published 31 ಡಿಸೆಂಬರ್ 2021, 9:40 IST
Last Updated 31 ಡಿಸೆಂಬರ್ 2021, 9:40 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ವರ್ಷಾಂತ್ಯಕ್ಕೆ ರಾಷ್ಟ್ರದ ಅರ್ಹ ಎಲ್ಲರಿಗೂ ಪೂರ್ಣ ಪ್ರಮಾಣದ ಲಸಿಕೆ ಪೂರೈಸುವ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

2021ರ ಅಂತ್ಯಕ್ಕೆ ಕೋವಿಡ್‌-19 ಸೋಂಕಿನ ವಿರುದ್ಧ ಅರ್ಹ ಎಲ್ಲರಿಗೂ ಎರಡು ಡೋಸ್‌ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಜೂನ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

'2021ರ ಅಂತ್ಯಕ್ಕೆ ಅರ್ಹ ಎಲ್ಲರಿಗೂ ಎರಡು ಡೋಸ್‌ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಇಂದು ವರ್ಷದ ಕೊನೆಯ ದಿನ. ರಾಷ್ಟ್ರದಲ್ಲಿ ಇನ್ನೂ ಲಸಿಕೆಯ ಅಭಾವ ಎದುರಿಸುತ್ತಿದೆ. ಇದು ಮತ್ತೊಂದು ಭಾಷಣಕಲೆಯ ವೈಫಲ್ಯ' ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ರಾಷ್ಟ್ರದಾದ್ಯಂತ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸುಮಾರು 114.67 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. 84.51 ಕೋಟಿಗೂ ಹೆಚ್ಚು ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 60.15 ಕೋಟಿಗೂ ಹೆಚ್ಚು ಮಂದಿಗೆ ಎರಡನೇ ಡೋಸ್‌ ಸಿಕ್ಕಿದೆ. 18 ವರ್ಷಕ್ಕಿಂತ ಮೇಲ್ಪಟ್ಟ, ಅರ್ಹ ಮಂದಿ 94 ಕೋಟಿಗೂ ಹೆಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.