ನವದೆಹಲಿ: ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಪೋರ್ಟಲ್‌ನಲ್ಲಿ ಅನಧಿಕೃತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದ 2.5 ಕೋಟಿಗೂ ಹೆಚ್ಚು ಶಂಕಿತ ಬಳಕೆದಾರರ ಐ.ಡಿಗಳನ್ನು ಕೃತಕ ಬುದ್ಧಿಮತ್ತೆ (ಎಐ) ಚಾಲಿತ ವ್ಯವಸ್ಥೆಯು ನಿಷ್ಕ್ರಿಯಗೊಳಿಸಿದೆ ಎಂದು ಭಾರತೀಯ ರೈಲ್ವೆ ಬುಧವಾರ ತಿಳಿಸಿದೆ.
ಭಾರತೀಯ ರೈಲ್ವೆಯ ಮೇ 22ರಂದು ಪ್ರತಿ ನಿಮಿಷಕ್ಕೆ ಅತ್ಯಧಿಕ ಬುಕಿಂಗ್ ದರವನ್ನು ದಾಖಲಿಸಿದೆ. ಅಂದು 60 ಸೆಕೆಂಡುಗಳಲ್ಲಿ 31,814 ಟಿಕೆಟ್‌ಗಳ ಬುಕಿಂಗ್ ಆಗಿದೆ. ಇದು ವ್ಯವಸ್ಥೆಯ ಕಾರ್ಯಕ್ಷಮತೆಯ ದಕ್ಷತೆಯನ್ನು ತೋರಿಸುತ್ತದೆ. ಇದೊಂದು ಮೈಲಿಗಲ್ಲು ಎಂದು ರೈಲ್ವೆ ಹೇಳಿದೆ.
ರೈಲ್ವೆಯು ತನ್ನ ಟಿಕೆಟಿಂಗ್ ವ್ಯವಸ್ಥೆಯ ಮೂಲ ಸೌಕರ್ಯದ ಸಮಗ್ರ ಮೌಲ್ಯಮಾಪನ ನಡೆಸಿದೆ. ಅತ್ಯಾಧುನಿಕ ‘ಆ್ಯಂಟಿ ಬಿಒಟಿ’ ವ್ಯವಸ್ಥೆ ಮತ್ತು ಸೇವಾ ಪೂರೈಕೆದಾರರ ಏಕೀಕೃತ ವಿತರಣಾ ಜಾಲದ ನೆರವಿನಿಂದ ಏಜೆಂಟರ ಅನಧಿಕೃತ ಸ್ವಯಂ ಚಾಲಿಕ ಬುಕಿಂಗ್‌ಗಳನ್ನು ಸಮರ್ಪಕವಾಗಿ ನಿಗ್ರಹಿಸಲಾಗಿದೆ. ಅದರ ಜತೆಗೆ ಬಳಕೆದಾರರಿಗೆ ಪೂರಕವಾಗಿ ವೆಬ್‌ಸೈಟ್ ಅನ್ನು ಸುಧಾರಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.