ADVERTISEMENT

ರೈಲು ಗಾಲಿ ತಯಾರಿಕೆಗೆ ಟೆಂಡರ್ ಆಹ್ವಾನ: ಅಶ್ವಿನಿ ವೈಷ್ಣವ್‌

ಟೆಂಡರ್‌ ಕರೆದ ರೈಲ್ವೆ ಇಲಾಖೆ; ಖಾಸಗಿ ಕಂಪನಿಗಳೂ ಆಹ್ವಾನ

ಪಿಟಿಐ
Published 9 ಸೆಪ್ಟೆಂಬರ್ 2022, 15:29 IST
Last Updated 9 ಸೆಪ್ಟೆಂಬರ್ 2022, 15:29 IST
ಅಶ್ವಿನ್‌ ವೈಷ್ಣವ್‌
ಅಶ್ವಿನ್‌ ವೈಷ್ಣವ್‌   

ನವದೆಹಲಿ: ‘ಮೇಕ್‌ ಇನ್‌ ಇಂಡಿಯಾ’ ಯೋಜನೆ ಅಡಿಯಲ್ಲಿ ರೈಲು ಗಾಲಿ ತಯಾರಿಕಾ ಘಟಕಗಳನ್ನು ನಿರ್ಮಿಸುವುದಕ್ಕಾಗಿ ರೈಲ್ವೆ ಇಲಾಖೆಯು ಶುಕ್ರವಾರ ಟೆಂಡರ್‌ ಕರೆದಿದೆ. ಖಾಸಗಿ ಕಂಪನಿಗಳಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.

‘ಗಾಲಿ ತಯಾರಿಕಾ ಘಟಕಗಳಲ್ಲಿ ₹600 ಕೋಟಿ ವೆಚ್ಚದಲ್ಲಿ ಪ್ರತಿ ವರ್ಷ 80 ಸಾವಿರ ಗಾಲಿಗಳನ್ನು ತಯಾರಿಸಲಾಗುತ್ತಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

‘ರೈಲ್ವೆ ಇಲಾಖೆಗೆ ಪ್ರತಿ ವರ್ಷ ಎರಡು ಲಕ್ಷ ಗಾಲಿಗಳ ಅಗತ್ಯ ಇದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಒಂದು ಲಕ್ಷ ಗಾಲಿಗಳನ್ನು ತಯಾರಿಸಲಿದೆ. ಇನ್ನುಳಿದ ಗಾಲಿಗಳನ್ನು ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿತಯಾರಿಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.