ADVERTISEMENT

ಹಬ್ಬಕ್ಕೆ ರೈಲ್ವೆಯಿಂದ ಹೆಚ್ಚುವರಿ ವಿಶೇಷ ರೈಲು

ಅ. 15ರಿಂದ ಕೆಲವು ರೈಲುಗಳ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 14:15 IST
Last Updated 13 ಅಕ್ಟೋಬರ್ 2020, 14:15 IST
ರೈಲಿನ ಪ್ರಾತಿನಿಧಿಕ ಚಿತ್ರ
ರೈಲಿನ ಪ್ರಾತಿನಿಧಿಕ ಚಿತ್ರ    

ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಲಿರುವ ಕಾರಣ, ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಅ. 15ರಿಂದ ಜನ ಶತಾಬ್ದಿ, ತುರಂತ್, ರಾಜಧಾನಿ ಹಾಗೂ ಎಸಿ ಎಕ್ಸ್‌ಪ್ರೆಸ್‌ ಸೇರಿದಂತೆ 40 ರೈಲುಗಳನ್ನು ಓಡಿಸಲಾಗುವುದು ಎಂದು ಉತ್ತರ ರೈಲ್ವೆ ಘೋಷಿಸಿದೆ.

ವಿವಿಧ ವಿಭಾಗಗಳಿಂದ ಅ.16ರಿಂದ ನ.30ರ ವರೆಗೆ 39 ವಿಶೇಷ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಲಖನೌ–ನವದೆಹಲಿ ಮತ್ತು ಅಹಮದಾಬಾದ್‌– ಮುಂಬೈ ನಡುವೆ ತೇಜಸ್‌ ಎಕ್ಸ್‌ಪ್ರೆಸ್‌ಗಳ ಸಂಚಾರವನ್ನು ನಿರ್ವಹಿಸುತ್ತಿರುವ ಐಆರ್‌ಸಿಟಿಸಿ, ಅ. 17ರಿಂದ ಈ ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಹೇಳಿದೆ.

‘ವಿಶೇಷ ರೈಲುಗಳು ಅ. 16ರಿಂದ ನ. 30ರವರೆಗೆ 200 ವಿಶೇಷ ರೈಲುಗಳನ್ನು ಓಡಿಸಲಾಗುವುದು’ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ.ಯಾದವ್‌ ಕೆಲ ದಿನಗಳ ಹಿಂದೆಯಷ್ಟೇ ಹೇಳಿದ್ದರು.

ದೇಶದಲ್ಲಿ ಕೋವಿಡ್‌ ಪ್ರಸರಣವನ್ನು ತಡೆಗಟ್ಟುವ ಸಂಬಂಧ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನುಮಾರ್ಚ್‌ 22ರಿಂದ ರೈಲ್ವೆ ರದ್ದು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.