ADVERTISEMENT

ಕಾಶ್ಮೀರದಲ್ಲಿ ಭಾರಿ ಮಳೆ: ರಾಷ್ಟ್ರೀಯ ಹೆದ್ದಾರಿ ಬಂದ್, ಅಮರನಾಥ ಯಾತ್ರೆ ಸ್ಥಗಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2023, 5:41 IST
Last Updated 22 ಜುಲೈ 2023, 5:41 IST
ಜಮ್ಮುವಿನಲ್ಲಿರುವ ಅಮರನಾಥ ಯಾತ್ರಿಕರು
ಜಮ್ಮುವಿನಲ್ಲಿರುವ ಅಮರನಾಥ ಯಾತ್ರಿಕರು   –ಟ್ವಿಟರ್ ಚಿತ್ರ

ಶ್ರೀನಗರ: ಜಮ್ಮು –ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ.

ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಜಮ್ಮುವಿನ ಶಿಬಿರದಿಂದ ಕಾಶ್ಮೀರಕ್ಕೆ ಹೊರಟಿದ್ದ 3,000ಕ್ಕೂ ಹೆಚ್ಚು ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಅನ್ನು ರಾಂಬನ್‌ನಲ್ಲಿ ತಡೆಯಲಾಗಿದೆ.

3,472 ಯಾತ್ರಾರ್ಥಿಗಳ 20ನೇ ಬ್ಯಾಚ್ ಶನಿವಾರ ಮುಂಜಾನೆ ಜಮ್ಮುವಿನ ಮೂಲ ಶಿಬಿರದಿಂದ 132 ವಾಹನಗಳಲ್ಲಿ ಹೊರಟಿತು. ಆದರೆ, ಹೆದ್ದಾರಿಯನ್ನು ಮುಚ್ಚಿದ್ದರಿಂದ ಬೆಂಗಾವಲು ಪಡೆ ಚಂದರ್‌ಕೋಟೆಯಲ್ಲಿ ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಮಳೆಯಿಂದಾಗಿ 270 ಕಿ.ಮೀ ಉದ್ದದ ಮೆಹರ್ ಮತ್ತು ದಲ್ವಾಸ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಓದಿ... ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಹಲವೆಡೆ ಭೂಕುಸಿತ, ರಾಷ್ಟ್ರೀಯ ಹೆದ್ದಾರಿ ಬಂದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.