ADVERTISEMENT

ಭದ್ರತಾ ಲೋಪ: ರಾಜ್ಯಪಾಲರನ್ನು ಭೇಟಿಯಾದ ರಾಜಸ್ಥಾನ ಬಿಜೆಪಿ ನಿಯೋಗ

ಪಿಟಿಐ
Published 8 ಜನವರಿ 2022, 14:31 IST
Last Updated 8 ಜನವರಿ 2022, 14:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ಗೆ ಭೇಟಿ ನೀಡಿದ ವೇಳೆ ಉಂಟಾದ ಭದ್ರತಾ ಗಂಭೀರ ಲೋಪದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಿಯೋಗವು ಶನಿವಾರ ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ನಿವೇದನೆಯನ್ನು ಸಲ್ಲಿಸಿದೆ.

ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ನೇತೃತ್ವದ ನಿಯೋಗದಲ್ಲಿ ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್, ಜೈಪುರ ಸಂಸದ ರಾಮಚರಣ್ ಬೋಹ್ರಾ ಮತ್ತು ಶಾಸಕರಾದ ರಾಮಲಾಲ್ ಶರ್ಮಾ ಮತ್ತು ಅಶೋಕ್ ಲಹೋಟಿ ಇದ್ದರು.

'ಗುಲಾಬ್ ಚಂದ್ ಕಟಾರಿಯಾ ನೇತೃತ್ವದ 6 ಸದಸ್ಯರನ್ನೊಳಗೊಂಡ ಬಿಜೆಪಿ ನಿಯೋಗವು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಮಾಡಿರುವ ಗಂಭೀರ ಲೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು' ಎಂದು ರಾಜಭವನ ಟ್ವೀಟ್ ಮೂಲಕ ತಿಳಿಸಿದೆ.

ADVERTISEMENT

ಪಕ್ಷವು ಲೋಪದೋಷದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.