ADVERTISEMENT

ಪತ್ನಿಗೆ ಕೋವಿಡ್: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್‌ ಪ್ರತ್ಯೇಕವಾಸ

ಪಿಟಿಐ
Published 28 ಏಪ್ರಿಲ್ 2021, 15:18 IST
Last Updated 28 ಏಪ್ರಿಲ್ 2021, 15:18 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪತ್ನಿ ಸುನಿತಾ ಗೆಹ್ಲೋಟ್‌ಗೆ ಕೋವಿಡ್–19 ಸೋಂಕು ತಗುಲಿದೆ. ಹೀಗಾಗಿ ಅಶೋಕ್ ಗೆಹ್ಲೋಟ್ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ.

‘ಪತ್ನಿ ಸುನಿತಾ ಗೆಹ್ಲೋಟ್‌ಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಪ್ರಕಾರ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಮನೆಯಲ್ಲೇ ಪತ್ಯೇಕವಾಸ ಆರಂಭಿಸಿದ್ದೇನೆ. ಪ್ರತಿದಿನ ರಾತ್ರಿ 8.30ಕ್ಕೆ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಆನ್‌ಲೈನ್ ಮೂಲಕ ಕೋವಿಡ್ ವಿಮರ್ಶೆ ಸಭೆ ನಡೆಸುತ್ತೇನೆ’ ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.