ADVERTISEMENT

ರಾಜಸ್ಥಾನ: ಆರೋಗ್ಯ ಹಕ್ಕು ಮಸೂದೆ ವಿರೋಧಿಸಿ ವೈದ್ಯರ ಸಾಮೂಹಿಕ ರಜೆ

ಪಿಟಿಐ
Published 29 ಮಾರ್ಚ್ 2023, 3:41 IST
Last Updated 29 ಮಾರ್ಚ್ 2023, 3:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ಆರೋಗ್ಯ ಹಕ್ಕು ಮಸೂದೆ ವಿರೋಧಿಸಿ ಖಾಸಗಿ ವೈದ್ಯರಿಗೆ ಬೆಂಬಲ ಸೂಚಿಸಿರುವ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಒಂದು ದಿನದ ಸಾಮೂಹಿಕ ರಜೆ ಘೋಷಿಸಿರುವುದರಿಂದ ರಾಜಸ್ಥಾನದಲ್ಲಿ ಇಂದು ವೈದ್ಯಕೀಯ ಸೇವೆಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರಲಿದೆ.

ಆದರೂ ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ವಿನಾಯಿತಿ ಇರುತ್ತದೆ.

ಒಪಿಡಿ, ಐಪಿಡಿ, ಐಸಿಯು, ತುರ್ತು ಮತ್ತು ಹೆರಿಗೆ ವಿಭಾಗಗಳಲ್ಲಿ ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ADVERTISEMENT

ಸ್ವಯಂಪ್ರೇರಿತವಾಗಿ ಮತ್ತು ಪೂರ್ವಾನುಮತಿ ಇಲ್ಲದೆ ರಜೆ ಮೇಲೆ ಇರುವ ಸರ್ಕಾರಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಕರ್ತವ್ಯ ಲೋಪ ಎಸಗಿರುವ ರೆಸಿಡೆಂಟ್ ವೈದ್ಯರ ನೋಂದಣಿ ರದ್ದುಪಡಿಸುವಂತೆ ಸರ್ಕಾರ ಸೂಚಿಸಿದೆ.

ಕಳೆದ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಿದ ಆರೋಗ್ಯ ಹಕ್ಕು ಮಸೂದೆಯನ್ನು ಹಿಂಪಡೆಯುವಂತೆ ಖಾಸಗಿ ವೈದ್ಯರು ಒತ್ತಾಯಿಸುತ್ತಿದ್ದಾರೆ.

ಧರಣಿ ನಿರತ ವೈದ್ಯರಿಗೆ ಬೆಂಬಲ ಸೂಚಿಸಿ ಒಂದು ದಿನದ ಮುಷ್ಕರ ನಡೆಸುವುದಾಗಿ ರಾಜಸ್ಥಾನ ವೈದ್ಯರ ಸಂಘವು ಘೋಷಿಸಿದೆ.

15,000ಕ್ಕೂ ಹೆಚ್ಚು ವೈದ್ಯರು ಆರೋಗ್ಯ ಹಕ್ಕು ಮಸೂದೆ ವಿರುದ್ಧದ ಚಳವಳಿಯನ್ನು ಬೆಂಬಲಿಸಿ ಕೆಲಸ ಬಹಿಷ್ಕರಿಸಲು ಒಂದು ದಿನದ ಸಾಮೂಹಿಕ ರಜೆ ಹಾಕಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಬಾಮ್ನಿಯಾ ಹೇಳಿದ್ಶಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.