ಜೈಪುರ: ವಿಮಾನ ದುರಂತದಲ್ಲಿ ಸಾವಿಗೀಡಾದವರಲ್ಲಿ ರಾಜಸ್ತಾನದ ಐವರು ಸೇರಿದ್ದಾರೆ. ಇವರಲ್ಲಿ ನಾಲ್ವರು ಉದಯಪುರ ಜಿಲ್ಲೆಯವರು. ಉದಯಪುರದ ಮಾರ್ಬಲ್ ಉದ್ಯಮಿಯ ಪುತ್ರ ಶುಭ್ ಮತ್ತು ಪುತ್ರಿ ಶಗುನ್ ಮೋದಿ ಮೃತಪಟ್ಟಿದ್ದಾರೆ. ಇವರಿಬ್ಬರೂ ಎಂಬಿಎ ಪದವೀಧರರು. ತಂದೆಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ಪ್ರವಾಸದ ಭಾಗವಾಗಿ ಲಂಡನ್‌ಗೆ ಪ್ರಯಾಣಿಸುತ್ತಿದ್ದರು.
ಮೃತಪಟ್ಟ ಇನ್ನೊಬ್ಬ ಪ್ರಯಾಣಿಕ ವರ್ದಿಚಂದ್ ಮನಾರಿಯಾ ಉದಯಪುರ ಜಿಲ್ಲೆಯ ವಲ್ಲಭನಗರದವರು. ಬರ್ಮರ್ ಜಿಲ್ಲೆಯ ಖುಷ್ಬೂ ರಾಜ್‌ಪುರೋಹಿತ್ ಎಂಬ ಮಹಿಳೆಯೂ ದುರಂತದಲ್ಲಿ ಮೃತಪಟ್ಟಿದ್ದಾರೆ.
ಏರ್ ಇಂಡಿಯಾ ಕಾರ್ಯಾಚರಿಸುತ್ತಿದ್ದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನಕ್ಕೆ ಎಲ್ಲಿಯೂ ನಿಲುಗಡೆ ಇರಲಿಲ್ಲ. 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಳಿಗಿಂತ ಹೆಚ್ಚು ದಹನಶೀಲ ವಾಯುಯಾನ ಇಂಧನವನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ಪತನಗೊಂಡ ಕೂಡಲೇ ಸ್ಫೋಟ ಸಂಭವಿಸಿ ಕಿತ್ತಳೆ ಬಣ್ಣದ ಬೆಂಕಿ ಉಂಡೆಗಳು ಆವರಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.