ADVERTISEMENT

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್‌ನಿಂದ ಇಂದು ಮತ್ತೆ ಸಭೆ

ಪಿಟಿಐ
Published 13 ಜುಲೈ 2020, 20:45 IST
Last Updated 13 ಜುಲೈ 2020, 20:45 IST
ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್ (ಸಂಗ್ರಹ ಚಿತ್ರ)
ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್ (ಸಂಗ್ರಹ ಚಿತ್ರ)   

ಜೈಪುರ: ರಾಜಸ್ಥಾನ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ಮಂಗಳವಾರ ಮತ್ತೊಮ್ಮೆ ಸಭೆ ಸೇರಲಿದೆ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಸಭೆಗೆ ಹಾಜರಾಗಿ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬೇಕು ಎಂದೂ ಅವರು ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರನ್ನು
ಒತ್ತಾಯಿಸಿದ್ದಾರೆ.ಪಕ್ಷದ ಶಾಸಕರುಗಳು ಈಗ ಇರುವ ರೆಸಾರ್ಟ್‌ನಲ್ಲೇ ಸಭೆ ನಡೆಯಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ನಾವು ಒಟ್ಟಾಗಿ ಸೇರಿ ರಾಜಸ್ಥಾನವನ್ನು ಹೇಗೆ ಬಲಪಡಿಸಬಹುದುಎಂಬುದನ್ನು ಪೈಲಟ್‌ ಮತ್ತು ಇತರ ಶಾಸಕರು ಚರ್ಚಿಸಬೇಕು ಅಲ್ಲದೆ ಏನಾದರೂ ಸಮಸ್ಯೆ ಇದ್ದರೂ ಮುಕ್ತವಾಗಿ ಮಾತುಕತೆ ನಡೆಸಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ಬಹುಮತ ಸಾಬೀತಿಗೆ ಆಗ್ರಹ: ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರನ್ನು ಎಷ್ಟು ಮಂದಿ ಶಾಸಕರು ಬೆಂಬಲಿಸುತ್ತಾರೆ ಎಂಬುದನ್ನು ತಿಳಿಯಲು ಶೀಘ್ರವೇ ರಾಜಸ್ಥಾನ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಹುಮತ ಸಾಬೀತು ಪಡಿಸಬೇಕು ಎಂದು ಹಿರಿಯ ಕಾಂಗ್ರೆಸ್‌ ನಾಯಕ ದೀಪೆಂದರ್ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.