ADVERTISEMENT

ಚಿಲ್ಲರೆ ಜಗಳ: ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಸ್ ಕಂಡಕ್ಟರ್

ಹೆಚ್ಚುವರಿ ₹10 ಟಿಕೆಟ್ ಹಣ ಕೇಳಿದ್ದನ್ನು ಪ್ರಶ್ನಿಸಿದ ಮಾಜಿ ಐಎಎಸ್ ಅಧಿಕಾರಿ ಒಬ್ಬರ ಮೇಲೆ ಬಸ್ ಕಂಡಕ್ಟರ್ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2025, 11:22 IST
Last Updated 13 ಜನವರಿ 2025, 11:22 IST
<div class="paragraphs"><p>ಚಿಲ್ಲರೆ ಜಗಳ: ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಸ್ ಕಂಡಕ್ಟರ್</p></div>

ಚಿಲ್ಲರೆ ಜಗಳ: ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಸ್ ಕಂಡಕ್ಟರ್

   

ಬೆಂಗಳೂರು: ಪ್ರಯಾಣದ ವೇಳೆ ಹೆಚ್ಚುವರಿ ₹10 ಟಿಕೆಟ್ ಹಣ ಕೇಳಿದ್ದನ್ನು ಪ್ರಶ್ನಿಸಿದ ನಿವೃತ್ತ ಐಎಎಸ್ ಅಧಿಕಾರಿ ಒಬ್ಬರ ಮೇಲೆ ಬಸ್ ಕಂಡಕ್ಟರ್ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಕಳೆದ ಶುಕ್ರವಾರ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಗಮನ ಸೆಳೆದಿದೆ.

ADVERTISEMENT

ರಾಜಸ್ಥಾನದ ನಿವೃತ್ತ ಐಎಎಸ್ ಅಧಿಕಾರಿ ಆರ್‌.ಎಲ್. ಮೀನಾ (75) ಎನ್ನುವರು ಜೈಪುರ ನಗರ ಸಾರಿಗೆ ಬಸ್‌ನಲ್ಲಿ ಆಗ್ರಾ ರಸ್ತೆಯ ಮಾರ್ಗವಾಗಿ ಕನೋಟಾ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಕನೋಟಾ ನಿಲ್ದಾಣ ಸಮೀಪಿಸಿದ್ದನ್ನು ಕಂಡಕ್ಟರ್ ಪ್ರಯಾಣಿಕರ ಗಮನಕ್ಕೆ ತಂದಿರಲಿಲ್ಲ. ಇದರಿಂದ, ಮೀನಾ ಅವರಿಗೆ, ಮುಂದಿನ ನೈಲಾ ಎಂಬಲ್ಲಿನ ನಿಲ್ದಾಣಕ್ಕೆ ಇಳಿದುಕೊಳ್ಳುವಂತೆ ಹಾಗೂ ಹೆಚ್ಚುವರಿ ₹10 ಟಿಕೆಟ್ ಹಣ ನೀಡುವಂತೆ ಕಂಡಕ್ಟರ್ ಒತ್ತಾಯಿಸಿದ್ದಾನೆ.

ಅಲ್ಲದೇ ಕಂಡಕ್ಟರ್‌ನೇ ಮೊದಲು ಮೀನಾ ಅವರ ಎದೆಯ ಮೇಲೆ ಕೈ ಇಟ್ಟು ತಳ್ಳಿದ್ದಾನೆ.

ಇದರಿಂದ ಕುಪಿತಗೊಂಡ ಮೀನಾ ಅವರು ಕಂಡಕ್ಟರ್‌ನ ಕೆನ್ನೆಗೆ ಬಾರಿಸಿದ್ದಾರೆ. ತಕ್ಷಣವೇ ಕಂಡಕ್ಟರ್, ಮೀನಾ ಅವರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ.

ಈ ಕುರಿತು ನಿವೃತ್ತ ಅಧಿಕಾರಿ ನೀಡಿರುವ ದೂರು ದಾಖಲಿಸಿಕೊಂಡಿರುವ ಪೊಲೀಸರು ಹಲ್ಲೆ ಮಾಡಿದ ಕಂಡಕ್ಟರ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಜೈಪುರ ನಗರ ಸಾರಿಗೆ ಅಧಿಕಾರಿಗಳು ಬಸ್ ಕಂಡಕ್ಟರ್‌ನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.