ADVERTISEMENT

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 7:26 IST
Last Updated 3 ಡಿಸೆಂಬರ್ 2019, 7:26 IST
ರಾಜೀವ್ ಧವನ್
ರಾಜೀವ್ ಧವನ್   

ನವದೆಹಲಿ: ಅಯೋಧ್ಯೆ-ಬಾಬರಿಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುನ್ನಿ ವಕ್ಫ್ ಮಂಡಳಿ ಮತ್ತುಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ.ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.

ಜಮೀಯತ್‌ನ್ನು ಪ್ರತಿನಿಧಿಕರಿಸುತ್ತಿರುವಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್) ಇಜಾಝ್ ಮಕ್ಬೂಲ್ ಅವರು ತಮ್ಮನ್ನು ಬಾಬರಿ ಪ್ರಕರಣದಿಂದ ವಜಾ ಮಾಡಿದ್ದಾರೆ. ನಾನು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಈ ಪ್ರಕರಣದಲ್ಲಿ ಇನ್ನು ಮುಂದೆ ನಾನು ಭಾಗಿಯಾಗಲ್ಲ ಎಂದಿದ್ದಾರೆ ಧವನ್.

ಆರೋಗ್ಯ ಸರಿ ಇಲ್ಲದಿರುವ ಕಾರಣ ಬಾಬರಿಪ್ರಕರಣದಲ್ಲಿ ವಕೀಲರಾಗಿ ಮುಂದುವರಿಸಲ್ಲ ಎಂದುಜಮೀಯತ್‌ ಉಲೇಮಾ ಎ ಹಿಂದ್‌ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ತನಗೆ ಮಾಹಿತಿ ನೀಡಿದ್ದರು.ಇದು ನಿಜಕ್ಕೂ ಮೂರ್ಖತನ. ಪ್ರಕರಣದಲ್ಲಿ ಯಾರು ವಾದಿಸಬೇಕೆಂದು ವಕೀಲರ ನೇಮಕ ಮಾಡುವ ಹಕ್ಕು ಅವರಿಗೆ ಇದೆ. ಆದರೆ ಇಜಾಝ್ ಸೂಚನೆ ಮೇರೆಗೆ ನನ್ನ ವಜಾಗೊಳಿಸಲಾಗಿದೆ. ಆದರೆ ವಜಾಗೊಳಿಸುವುದಕ್ಕಾಗಿನೀಡಿರುವ ಕಾರಣ ದುರುದ್ದೇಶಮತ್ತು ಸುಳ್ಳುಎಂದು ಧವನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ADVERTISEMENT

ಸೋಮವಾರ ಅಯೋಧ್ಯೆಯ ರಾಮ ಭೂಮಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಮರು ವಿಮರ್ಶೆಅರ್ಜಿ ಸಲ್ಲಿಸಲಾಗಿತ್ತು.

ಮೌಲಾನಾ ಸಯ್ಯದ್ ಅಶಾದ್ ರಷೀದಿ ಅವರು ಅರ್ಜಿ ಸಲ್ಲಿಸಿದ್ದು ಬಾಬರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.