ADVERTISEMENT

ಗಗನಯಾನಿ ಸುನಿತಾಗೆ ಭಾರತ ರತ್ನ ನೀಡುವಂತೆ ರಾಜ್ಯಸಭೆಯಲ್ಲಿ ಒತ್ತಾಯಿಸಿದ TMC ಸಂಸದ

ಪಿಟಿಐ
Published 2 ಏಪ್ರಿಲ್ 2025, 10:49 IST
Last Updated 2 ಏಪ್ರಿಲ್ 2025, 10:49 IST
<div class="paragraphs"><p>ಸುನಿತಾ ವಿಲಿಯಮ್ಸ್</p></div>

ಸುನಿತಾ ವಿಲಿಯಮ್ಸ್

   

ನವದೆಹಲಿ: 9 ತಿಂಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿದ್ದು, ಭೂಮಿಗೆ ಮರಳಿದ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಅವರಿಗೆ 'ಭಾರತ ರತ್ನ' ನೀಡಿ ಗೌರವಿಸಬೇಕೆಂದು ಟಿಎಂಸಿ ಸಂಸದ ಮೊಹಮ್ಮದ್ ನದಿಮುಲ್ ಹಕ್ ರಾಜ್ಯಸಭೆಯಲ್ಲಿ ಬುಧವಾರ ಒತ್ತಾಯಿಸಿದರು.

'ಸುನಿತಾ ವಿಲಿಯಮ್ಸ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಯಶಸ್ಸನ್ನು ಸಂಭ್ರಮಿಸಬೇಕು. ವಿಲಿಯಮ್ಸ್ ಅವರ ಗಮನಾರ್ಹ ಸಾಧನೆಗೆ ಗೌರವಪೂರ್ವಕವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ನೀಡಬೇಕೆಂದು' ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿರುವುದನ್ನು ಉಲ್ಲೇಖಿಸಿ, ಸದನದಲ್ಲಿ ಅವರು ಮಾತನಾಡಿದರು.

ADVERTISEMENT

ಈ ವೇಳೆ ಗುಜರಾತಿನ ಬಿಜೆಪಿ ನಾಯಕರೊಬ್ಬರ ಸಾವು ಪ್ರಸ್ತಾಪಿಸಿ, ಹಕ್ ಹೇಳಿಕೆ ನೀಡಿದರು. ಮಧ್ಯಪ್ರವೇಶಿಸಿದ ನಿರ್ಮಲಾ ಸೀತಾರಾಮನ್‌ ಆಕ್ಷೇಪ ವ್ಯಕ್ತಪಡಿಸಿದರು.

9 ತಿಂಗಳ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್‌, ಬುಚ್‌ ವಿಲ್ಮೋರ್‌ ಸೇರಿದಂತೆ ನಾಲ್ವರು ಗಗನಯಾನಿಗಳು ಸುರಕ್ಷಿತವಾಗಿ ಇತ್ತೀಚೆಗೆ ಭೂಮಿಗೆ ಮರಳಿದ್ದರು.

ಕಳೆದ ವರ್ಷ ಜೂನ್‌ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್‌ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್‌) ತೆರಳಿದ್ದ ಕ್ರೂ–9 ಮಿಷನ್‌ನ ಸಿಬ್ಬಂದಿ ಸುನಿತಾ ಮತ್ತು ಬುಚ್‌, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.