ADVERTISEMENT

ನಟ ಅಲೋಕ್‌ ನಾಥ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಪಿಟಿಐ
Published 21 ನವೆಂಬರ್ 2018, 11:41 IST
Last Updated 21 ನವೆಂಬರ್ 2018, 11:41 IST
ಅಲೋಕ್‌ ನಾಥ್‌
ಅಲೋಕ್‌ ನಾಥ್‌   

ಮುಂಬೈ: ಹಿಂದಿ ಕಿರುತೆರೆ ನಟ ಅಲೋಕ್‌ ನಾಥ್ ವಿರುದ್ಧ ಅಂಧೇರಿಯ ಒಶಿವಾರಾ ಪೊಲೀಸ್‌ ಠಾಣೆಯಲ್ಲಿಅತ್ಯಾಚಾರ ಪ್ರಕರಣ ದಾಖಲಾಗಿದೆ.

‘19 ವರ್ಷಗಳ ಹಿಂದೆ ಅಲೋಕ್‌ ನಾಥ್‌, ನನ್ನ ಮೇಲೆ ಅತ್ಯಾಚಾರ ಎಸಗಿದ್ದರು’ ಎಂದು ಆರೋಪಿಸಿ ಲೇಖಕಿ, ನಿರ್ಮಾಪಕಿಯೊಬ್ಬರುಈಚೆಗೆ ಪೊಲೀಸರಿಗೆ ದೂರು ನೀಡಿದ್ದರು.

ಮಿ–ಟೂ ಅಭಿಯಾನದ ಭಾಗವಾಗಿ ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರು ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ, ಈ ನಿರ್ಮಾಪಕಿ ಕೂಡ ಅಲೋಕ್‌ ನಾಥ್‌ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

ADVERTISEMENT

ತನ್ನ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಅಲೋಕ್‌ ನಾಥ್‌, ನಿರ್ಮಾಪಕಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಮೀ–ಟೂ ಆರೋಪ ಮಾಡಿದ್ದ ನಿರ್ಮಾಪಕಿ, ಅಲೋಕ್‌ ನಾಥ್‌ ಹೆಸರು ಉಲ್ಲೇಖಿಸದೆ ‘ಅತ್ಯಂತ ಸಂಸ್ಕಾರಿ ನಟ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.