
ಥೇಣಿ(ತಮಿಳುನಾಡು): ಪಕ್ಷದ ನಿಯಮಗಳಿಗೆ ತಿದ್ದುಪಡಿ ತಂದಿರುವುದನ್ನು ಟೀಕಿಸಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕ ಒ. ಪನ್ನೀರ್‌ಸೆಲ್ವಂ, ‘ಅದನ್ನು ಬದಲಾಯಿಸಲು ಅವರು ಯಾರು?’ ಎಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಹೆಸರು ಉಲ್ಲೇಖಿಸಿದೆ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಂ. ಜಿ. ರಾಮಚಂದ್ರನ್ ಅವರು ಪಕ್ಷವನ್ನು ಕಟ್ಟಿ ಈ ನಿಯಮಗಳನ್ನು ತಂದಿದ್ದಾರೆ. ಅದನ್ನು ಬದಲಾಯಿಸಲು ನೀವು(ಎಡಪ್ಪಾಡಿ ಕೆ ಪಳನಿಸ್ವಾಮಿ) ಯಾರು?’ ಎಂದು ಕೇಳಿದ್ದಾರೆ.
‘ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು 46 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ’ ಎಂದೂ ಹೇಳಿದ್ದಾರೆ.
‘ನಾನು ಶಾಸಕನಾಗಿದ್ದೇನೆ. ಮುಖ್ಯಮಂತ್ರಿಯಾಗಿದ್ದೇನೆ. ಪಕ್ಷದ ಸಂಯೋಜಕನಾಗಿಯೂ ಕೆಲಸ ಮಾಡಿದ್ದೇನೆ. ನಾನು ಯಾವ ತಪ್ಪು ಮಾಡಿದೆ? ಎಂದಾದರೂ ಒಬ್ಬ ಕಾರ್ಯಕರ್ತನ ವಿರುದ್ಧ ಕೈ ಎತ್ತಿದ್ದೇನೆಯೇ? ನಾನು ಯಾವ ತಪ್ಪು ಮಾಡಿದ್ದೇನೆ ಎಂದು ನೀವು ನನಗೆ ಹೇಳಿದರೆ, ರಾಜಕೀಯವನ್ನು ತೊರೆಯುತ್ತೇನೆ’ ಎಂದು ಸವಾಲು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.