ADVERTISEMENT

'ಕೈ' ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದಲ್ಲಿ ಕುಸಿದ ರಿಯಲ್ ಎಸ್ಟೇಟ್: ಕೆಟಿಆರ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 15:42 IST
Last Updated 24 ನವೆಂಬರ್ 2023, 15:42 IST
 ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್
ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್   

ಹೈದರಾಬಾದ್: ನೆರೆಯ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಿಯಲ್‌ ಎಸ್ಟೇಟ್ ಮತ್ತು ನಿರ್ಮಾಣ ಉದ್ಯಮದಲ್ಲಿ ಶೇಕಡ 28 ರಷ್ಟು ಕುಸಿತವಾಗಿದೆ ಎಂದು ತೆಲಂಗಾಣದ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಆರೋಪಿಸಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ 'ರಿಯಲ್ ಎಸ್ಟೇಟ್ ಶೃಂಗಸಭೆ'ಯಲ್ಲಿ ಕೆಟಿಆರ್ ಅವರು, ಹೈದರಾಬಾದ್ ಬಗ್ಗೆ ತಮ್ಮ ದೃಷ್ಟಿಕೋನ ಮತ್ತು ಡಿಸೆಂಬರ್ 3 ರಂದು ಮೂರನೇ ಬಾರಿಗೆ ಸರ್ಕಾರ ರಚಿಸಿದ ನಂತರ ಕೈಗೊಳ್ಳಬೇಕಾದ ಕಾರ್ಯ ಯೋಜನೆಯನ್ನು ಹಂಚಿಕೊಂಡರು.

'ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ ಕೆಟಿಆರ್, ಬೆಂಗಳೂರಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕುಸಿತವಾಗಿದೆ. ಸ್ಥಿರ ಸರ್ಕಾರ ಮತ್ತು ಸಮರ್ಥ ನಾಯಕತ್ವ ಮಾತ್ರ ಪ್ರಗತಿ ಮುಂದುವರಿಸಬಹುದು. ನಿಮ್ಮ ರಜಾದಿನಗಳನ್ನು ಮತ್ತು ಉದ್ಯಮದ ಉತ್ಕರ್ಷವನ್ನು ಆನಂದಿಸಲು ಬಯಸಿದರೆ, ನಮಗೆ ರಜೆ ನೀಡಬೇಡಿ. ಎಲ್ಲರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರವನ್ನು ಪ್ರೋತ್ಸಾಹಿಸಿ’ ಎಂದು ಕೆಟಿಆರ್‌ ಮನವಿ ಮಾಡಿದರು. 

ADVERTISEMENT

ಮೂವರು ಪ್ರಮುಖ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ ಕೆಟಿಆರ್, 1999 ರಿಂದ 2004 ರವರೆಗೆ ಚಂದ್ರಬಾಬು ನಾಯ್ಡು ಸರ್ಕಾರ ಐ.ಟಿ ಮತ್ತು ಹೈದರಾಬಾದ್ ಪರವಾಗಿತ್ತು. 2004 ರಿಂದ 2009 ರವರೆಗೆ ವೈ.ಎಸ್. ರಾಜಶೇಖರ ರೆಡ್ಡಿ ಸರ್ಕಾರವು ಗ್ರಾಮೀಣ, ಕೃಷಿ, ಬಡವರ ಪರವಾಗಿತ್ತು ಎಂದು ಹೇಳಿದರು. 2014ರಿಂದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಬಿಆರ್‌ಎಸ್‌ ಸರ್ಕಾರವು ನಗರ - ಗ್ರಾಮೀಣ, ಕೃಷಿ - ಉದ್ಯಮ ಮತ್ತು ಬಡವರ ಪರವಾಗಿದೆ. ಎಲ್ಲದರಲ್ಲೂ ಸಮತೋಲನ ಕಾಯ್ದುಕೊಂಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.