ADVERTISEMENT

ಮಹಾರಾಷ್ಟ್ರ | ಶಿವಾಜಿ ಮಹಾರಾಜರ ನೂತನ ಪ್ರತಿಮೆ; ಶಿಲ್ಪಿ ರಾಮ್ ಸುತಾರಾಗೆ ಹೊಣೆ

ಪಿಟಿಐ
Published 14 ಡಿಸೆಂಬರ್ 2024, 10:53 IST
Last Updated 14 ಡಿಸೆಂಬರ್ 2024, 10:53 IST
<div class="paragraphs"><p>ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ&nbsp; ರಾಜ್‌ಕೋಟ್‌ ಕೋಟೆಯ ಆವರಣದಲ್ಲಿ ಕುಸಿದ&nbsp;ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ </p></div>

ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ  ರಾಜ್‌ಕೋಟ್‌ ಕೋಟೆಯ ಆವರಣದಲ್ಲಿ ಕುಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ

   

ಮುಂಬೈ: ಮಹಾರಾಷ್ಟ್ರದ ರಾಜ್‌ಕೋಟ್ ಬಳಿಯ ಮಾಲ್ವಾನ್‌ನಲ್ಲಿ ಪ್ರತಿಮೆ ಕುಸಿದಿದ್ದ ಸ್ಥಳದಲ್ಲೇ ಛತ್ರಪತಿ ಶಿವಾಜಿ ಮಹಾರಾಜರ 60 ಅಡಿ ಎತ್ತರದ ನೂತನ ಪ್ರತಿಮೆ ಸ್ಥಾಪಿಸುವ ಗುತ್ತಿಗೆಯನ್ನು ಮಹಾರಾಷ್ಟ್ರ ಸರ್ಕಾರವು ಶಿಲ್ಪಿ ರಾಮ್ ಸುತಾರ ಅವರ ಸಂಸ್ಥೆಗೆ ನೀಡಿದೆ.

2023ರ ಡಿ. 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆಯು 2024ರ ಆ. 26ರಂದು ಕುಸಿದಿತ್ತು. 17ನೇ ಶತಮಾನದ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತವು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಕಳಪೆ ಗುಣಮಟ್ಟದಲ್ಲಿ ಪ್ರತಿಮೆಯನ್ನು ನಿರ್ಮಿಸುವ ಮೂಲಕ ಛತ್ರಪತಿಯನ್ನು ಮಹಾಯುತಿ ಸರ್ಕಾರ ಅವಮಾನಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ADVERTISEMENT

‘ಇದೀಗ ಅದೇ ಸ್ಥಳದಲ್ಲಿ ಛತ್ರಪತಿ ಶಿವಾಜಿ ಅವರ ನೂತನ ಕಂಚಿನ 60 ಅಡಿ ಎತ್ತರದ ಪ್ರತಿಮೆಯನ್ನು 10 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಈ ಪ್ರತಿಮೆಯಲ್ಲಿ ಶಿವಾಜಿ ಮಹಾರಾಜರು ಖಡ್ಗವನ್ನು ಎತ್ತಿ ಹಿಡಿದಿರುವಂತೆ ಸಿದ್ಧಪಡಿಸಲಾಗುವುದು’ ಎಂದು ಪದ್ಮಶ್ರೀ ಪುರಸ್ಕೃತ ಶಿಲ್ಪಿ ಅನಿಲ್ ಸುತಾರ ತಿಳಿಸಿದರು.

‘ಪ್ರತಿಮೆ ನಿರ್ಮಾಣಕ್ಕೆ 40 ಟನ್ ಕಂಚು ಹಾಗೂ 28 ಟನ್ ಸ್ಟೈಲ್‌ಲೆಸ್‌ ಸ್ಟೀಲ್ ಅನ್ನು ಬಳಸಲಾಗುವುದು. ಆರು ತಿಂಗಳ ಒಳಗಾಗಿ ಇದರ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ಆ. 26ರಂದು ಶಿವಾಜಿ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಜಯದೀಪ್ ಆಪ್ಟೆ, ಕನ್ಸಲ್ಟೆಂಟ್‌ ಚೇತನ್ ಪಾಟೀಲ್ ಮತ್ತು ಫ್ಯಾಬ್ರಿಕೇಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಂತರ ನೂತನ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಸಮಿತಿಯೊಂದನ್ನು ರಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.