ADVERTISEMENT

ಅಣ್ವಸ್ತ್ರಗಳನ್ನು ದೀಪಾವಳಿಗಾಗಿ ಇಟ್ಟಿಲ್ಲ: ಮೋದಿ ಭಾಷಣ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 11:50 IST
Last Updated 29 ಏಪ್ರಿಲ್ 2019, 11:50 IST
   

ನವದೆಹಲಿ: ಭಾರತೀಯ ಸೇನಾಪಡೆಯನ್ನು ರಾಜಕೀಯಕ್ಕೆ ಬಳಸಬೇಡಿ ಎಂದು ಚುನಾವಣಾ ಆಯೋಗ ಹೇಳಿತ್ತು.ಆದರೆ ಬಾರ್‌ಮರ್ ಜಿಲ್ಲೆಯಲ್ಲಿ ಮಾತನಾಡಿದ್ದ ಮೋದಿ, ಸೇನೆಯ ವಿಷಯವನ್ನು ತಮ್ಮ ಭಾಷಣದಲ್ಲಿ ಬಳಸಿದ್ದಾರೆ. ಈ ಮೂಲಕ ಅವರು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.

ಮೋದಿ ಭಾಷಣದ ಬಗ್ಗೆ ಇರುವ ವಾಸ್ತವಿಕ ವರದಿಯನ್ನು ಚುನಾವಣಾ ಆಯೋಗಕ್ಕೆ ಕಳಿಸಿದ್ದೇವೆ ಎಂದ ಬಾರ್‌ಮರ್ ಜಿಲ್ಲೆಯ ಚುನಾವಣಾ ಆಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್ 21ರಂದು ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆ ಭಾರತ ಹೆದರುವುದಿಲ್ಲ.
ಪಾಕಿಸ್ತಾನದ ಬೆದರಿಕೆಗಳಿಗೆ ಭಯಪಡುವುದನ್ನು ಭಾರತ ನಿಲ್ಲಿಸಿದೆ.ನಾನು ಮಾಡಿದ್ದು ಸರಿ ಅಲ್ಲವೇ? ಇಲ್ಲದೇ ಇದ್ದರೆ ಪಾಕಿಸ್ತಾನ ದಿನಕ್ಕೊಮ್ಮೆ ನನ್ನಲ್ಲಿ ಅಣ್ವಸ್ತ್ರ ಇದೆ ಎಂದು ಹೇಳುತ್ತಿತ್ತು.ಹಾಗಾದರೆ ನಮ್ಮಲ್ಲಿ ಇರುವುದು ಏನು? ಅಣ್ವಸ್ತ್ರವನ್ನು ನಾವು ದೀಪಾವಳಿಗಾಗಿ ಇಟ್ಟಿಲ್ಲ ಎಂದಿದ್ದರು.

ADVERTISEMENT

ಮೋದಿ ತಮ್ಮ ಭಾಷಣದಲ್ಲಿ ಭಾರತೀಯ ಸೇನೆಯನ್ನು ಬಳಸಿದ್ದಾರೆ ಎಂದು ಏಪ್ರಿಲ್ 22ರಂದು ಕಾಂಗ್ರೆಸ್ ಚುನಾವಣಾ ಆಯೋ8ಕ್ಕೆ ದೂರು ನೀಡಿ, ಮೋದಿ ಚುನಾವಣಾ ಪ್ರಚಾರಕ್ಕೆ ಕೆಲವು ದಿನಗಳನ ನಿರ್ಬಂಧ ವಿಧಿಸುವಂತೆ ಒತ್ತಾಯಿಸಿತ್ತು.

ಈ ದೂರನ್ನು ಸ್ವೀಕರಿಸಿದ ಆಯೋಗವು, ಮೋದಿ ಭಾಷಣದ ಬಗ್ಗೆ ವಾಸ್ತವಿಕ ವರದಿ ಸಲ್ಲಿಸುವಂತ ಬಾರ್‌ಮರ್ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.