
ನವದೆಹಲಿ: ಇಂದು (ಸೋಮವಾರ) ದೇಶದಾದ್ಯಂತ 77ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಭಾರತದ ಮಿಲಿಟರಿ ಶಕ್ತಿ ಪ್ರದರ್ಶನವಾಗಿದೆ.
ಗಣರಾಜ್ಯೋತ್ಸವದ ಅಂಗವಾಗಿ ಆಪರೇಷನ್ ಸಿಂಧೂರ ಸಮಯದಲ್ಲಿ ಬಳಸಲಾದ ಶಸ್ತಾಸ್ತ್ರಗಳು ಸೇರಿದಂತೆ ಬ್ರಹ್ಮೋಸ್, ಆಕಾಶ್ ಮತ್ತು S-400 ಕ್ಷಿಪಣಿಗಳು ಅದ್ಭುತ ಪರಾಕ್ರಮ ಪ್ರದರ್ಶಿಸಿದೆ.
ರಾಕೆಟ್ ಲಾಂಚರ್ 'ಸೂರ್ಯಸ್ತ್ರ', ಮುಖ್ಯ ಯುದ್ಧ ಟ್ಯಾಂಕ್ ಅರ್ಜುನ್ ಸೇರಿದಂತೆ ದೇಶಿಯ ಶಸ್ತಾಸ್ತ್ರಗಳು ಎಲ್ಲರ ಗಮನ ಸೆಳೆದಿದೆ.
ದೇಶೀಯ ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್, ಯುದ್ಧ ಹೆಲಿಕಾಪ್ಟರ್‌ಗಳಾದ ರುದ್ರ, ಪ್ರಹಾರ್ ವೈಮಾನಿಕ ಪ್ರದರ್ಶನ ನೀಡಿದವು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು. ಪರೇಡ್‌ನಲ್ಲಿ ಭಾರತೀಯ ನೌಕಾಪಡೆಯ, ವಾಯುಪಡೆ, ಭೂಸೇನೆಯಿಂದ ತುಕಡಿಗಳು ಭಾಗಿಯಾಗಿದ್ದವು. ಈ ವೇಳೆ ಆರ್ಥಿಕತೆ, ಮಿಲಿಟರಿ ಸೇರಿದಂತೆ ದೇಶದ ಸಾಂಸ್ಕೃತಕತೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.
ಕರ್ತವ್ಯ ಪಥದಲ್ಲಿ ಈ ಬಾರಿಯ ವಿಶೇಷ ಅಂದರೆ ವಂದೇ ಮಾತರಂ ಗೀತೆಗೆ 150 ವರ್ಷ ಹಿನ್ನೆಲೆ ಅನೇಕ ಕಾರ್ಯಕ್ರಮಗಳು ಜರುಗಿದವು.
ಈ ಬಾರಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.