ಜೈಪುರ: ಲೋಕಸಭಾ ಚುನಾವಣೆಯ ವೇಳೆ ಮೀಸಲಾತಿಗೆ ಸಂಬಂಧಿಸಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿರುವುದರ ನಡುವೆಯೇ ರಾಜಸ್ಥಾನದ ಸಚಿವ ಅವಿನಾಶ್ ಗೆಹಲೋತ್ ಅವರು, ‘ರಾಜ್ಯದಲ್ಲಿ ಒಬಿಸಿ ಪ್ರವರ್ಗದ ಅಡಿಯಲ್ಲಿ ಕೆಲವು ಮುಸ್ಲಿಂ ಗುಂಪುಗಳಿಗೆ ಮೀಸಲಾತಿ ನೀಡಿರುವುದನ್ನು ಪರಿಶೀಲಿಸಲಾಗುವುದು’ ಎಂದಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರವು ಓಲೈಕೆಯ ರಾಜಕಾರಣಕ್ಕಾಗಿ 1997ರಿಂದ 2013ರ ನಡುವೆ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಿದೆ ಎಂದು ಆರೋಪಿಸಿದರು.
ಒಬಿಸಿ ಪ್ರವರ್ಗದಡಿ ಮುಸ್ಲಿಮರ 14 ಜಾತಿಗಳನ್ನು ಸೇರಿಸಲಾಗಿದೆ. ಈ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ಧರ್ಮದ ಆಧಾರದಲ್ಲಿ ಯಾವುದೇ ಜಾತಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಉಲ್ಲೇಖಿಸಿದ್ದಾರೆ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಅಸಂವಿಧಾನಿಕ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.