ADVERTISEMENT

ಸಕಾರಣದಿಂದಲೇ ನಿವಾಸಿ ವೈದ್ಯರ ತರಬೇತಿ ಅವಧಿ ವಿಸ್ತರಣೆ: ದೆಹಲಿ ಹೈಕೋರ್ಟ್‌

ಪಿಟಿಐ
Published 30 ಮೇ 2021, 9:24 IST
Last Updated 30 ಮೇ 2021, 9:24 IST
.
.   

ನವದೆಹಲಿ: ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಆಸ್ಪತ್ರೆಗಳ ಕಾರ್ಯ ನಿರ್ವಹಣೆಗೆ ನಿವಾಸಿ ವೈದ್ಯರ ಸೇವೆ ಕಡ್ಡಾಯವಾಗಿದೆ ಎಂದಿರುವ ದೆಹಲಿ ಹೈಕೋರ್ಟ್‌, ಈ ಕುರಿತು ವೇಳಾಪಟ್ಟಿಯನ್ನು ಮೀರಿ ತರಬೇತಿ ಅವಧಿಯನ್ನು ವಿಸ್ತರಿಸಿರುವುದು ಸಕಾರಣದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದೆ.

ತರಬೇತಿ ಅವಧಿಯನ್ನು ವಿಸ್ತರಿಸಿ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) 2021ರ ಮೇ 4ರಂದು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಡಿಎನ್‌ಬಿ ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ನ ಕೆಲ ವೈದ್ಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು.

ಡಿಎನ್‌ಬಿ ಕೋರ್ಸ್ ಮೂರು ವರ್ಷಗಳದ್ದಾಗಿದ್ದು, ಮೂರು ತಿಂಗಳವರೆಗೆ ವಿಸ್ತರಿಸಬಹುದಾಗಿದೆ. ಈಗಾಗಲೇ ಈ ಅವಧಿಯನ್ನು ಪೂರೈಸಿ, ಸೇವೆ ಸಲ್ಲಿಸಿದ್ದೇವೆ. ಇದನ್ನೂ ಮೀರಿ ಕೋರ್ಸ್‌ನ ಅವಧಿಯನ್ನು ವಿಸ್ತರಿಸಿರುವ ಅಧಿಕಾರ ಮಂಡಳಿಗೆ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ADVERTISEMENT

ಪಿಡುಗಿನ ಸಂದರ್ಭದಲ್ಲಿ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ನಿವಾಸಿ ವೈದ್ಯರ ಲಭ್ಯತೆ ಅತ್ಯಗತ್ಯವಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮತ್ತು ಎನ್‌ಬಿಇ ಪರ ವಕೀಲರು ವಾದಿಸಿದರು. ಇದನ್ನು ನ್ಯಾಯಮೂರ್ತಿ ಪ್ರತೀಕ್ ಜಲಾನ್‌ ಅವರು ಮಾನ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.