ADVERTISEMENT

ಲಖಿಂಪುರ ಹಿಂಸಾಚಾರ; ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ

ಮೃತ ಕುಟುಂಬಕ್ಕೆ ₹45 ಲಕ್ಷ, ಒಬ್ಬರಿಗೆ ಸರ್ಕಾರಿ ಉದ್ಯೋಗ

ಪಿಟಿಐ
Published 4 ಅಕ್ಟೋಬರ್ 2021, 10:48 IST
Last Updated 4 ಅಕ್ಟೋಬರ್ 2021, 10:48 IST
ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರ ಪಾರ್ಥಿವ ಶರೀರಗಳ ಎದುರು ಕಣ್ಣೀರಿಡುತ್ತಿರುವ ಕುಟುಂಬದ ಸದಸ್ಯರು.
ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರ ಪಾರ್ಥಿವ ಶರೀರಗಳ ಎದುರು ಕಣ್ಣೀರಿಡುತ್ತಿರುವ ಕುಟುಂಬದ ಸದಸ್ಯರು.   

ಲಖನೌ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ ತನಿಖೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ನಡೆಸಲಾಗುತ್ತದೆ ಎಂದು ಪ್ರಕಟಿಸಿರುವ ಉತ್ತರ ಪ್ರದೇಶ ಸರ್ಕಾರ, ಮೃತ ರೈತರ ಕುಟುಂಬಗಳಿಗೆ ತಲಾ ₹45 ಲಕ್ಷ ಪರಿಹಾರ ಘೋಷಿಸಿದೆ.

‘ಘಟನೆಯಲ್ಲಿಗಾಯಗೊಂಡವರಿಗೆ ₹10 ಲಕ್ಷ ಪರಿಹಾರ ನೀಡಲಾಗುವುದು. ಜೊತೆಗೆ, ಮೃತ ರೈತರ ಕುಟುಂಬದ ಒಬ್ಬರು ಸದಸ್ಯರಿಗೆ ಸ್ಥಳೀಯ ಹಂತದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ‘ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ಹೇಳಿದರು.

‘ಈ ಎಲ್ಲ ಮಾಹಿತಿಗಳಿರುವ ಒಪ್ಪಂದ ಪತ್ರವನ್ನು ರೈತರಿಗೆ ತಲುಪಿಸಲಾಗಿದೆ‘ ಎಂದು ಅವಸ್ಥಿ ತಿಳಿಸಿದರು.

ADVERTISEMENT

ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಮತ್ತು ನಾಲ್ವರ ಬಿಜೆಪಿ ಕಾರ್ಯಕರ್ತರು ಸೇರಿ ಎಂಟು ಮಂದಿ ಸಾವನ್ನಪ್ಪಿದ್ದರು. ಉದ್ರಿಕ್ತ ರೈತರ ಗುಂಪು ಎರಡು ಎಸ್‌ಯುವಿ ಕಾರುಗಳಿಗೆ ಬೆಂಕಿ ಹಚ್ಚಿತ್ತು. ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.