ADVERTISEMENT

ರೈಲುಗಳ ಡಿಕ್ಕಿ: ನಿವೃತ್ತಿ ದಿನವೇ ಲೋಕೊ ಪೈಲಟ್ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಪಿಟಿಐ
Published 2 ಏಪ್ರಿಲ್ 2025, 10:55 IST
Last Updated 2 ಏಪ್ರಿಲ್ 2025, 10:55 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಕೋಲ್ಕತ್ತ: ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ಎರಡು ಸರಕು ಸಾಗಣೆ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎನ್‌ಟಿಪಿಸಿ ಲೋಕೊ ಪೈಲಟ್ ಗಂಗೇಶ್ವರ್ ಮಾಲ್ ಮೃತಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ನಿವಾಸಿಯಾಗಿರುವ ಗಂಗೇಶ್ವರ್ ಮಾಲ್ ಅವರು ಏಪ್ರಿಲ್ 1ರಂದು ನಿವೃತ್ತರಾಗಲಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಎಂದಿನಂತೆ ಕೆಲಸ ಹೋಗುವ ವೇಳೆ ಸಂಜೆ ಬೇಗ ಮನೆಗೆ ವಾಪಸ್ ಬರುತ್ತೇನೆ. ಎಲ್ಲರೂ ಒಟ್ಟಿಗೆ ಊಟಕ್ಕೆ ಹೋಗೋಣ ಎಂದು ಭರವಸೆ ನೀಡಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ADVERTISEMENT

‘ಬಾಬಾ (ತಂದೆ) ಅವರು ಕೆಲಸ ಮುಗಿಸಿಕೊಂಡು ಹಿಂತಿರುಗಲು ಸಿಗ್ನಲ್ ಪಾಯಿಂಟ್‌ನಲ್ಲಿ ಕಾಯುತ್ತಿದ್ದರು. ಆದರೆ, ಎದುರು ಬದಿಯಿಂದ ಬಂದ ಮತ್ತೊಂದು ಸರಕು ಸಾಗಣೆ ರೈಲು ಡಿಕ್ಕಿ ಹೊಡೆದಿದೆ’ ಎಂದು ಗಂಗೇಶ್ವರ್ ಅವರ ಮಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬರ್ಹೈಟ್ ಪೊಲೀಸ್ ಠಾಣೆ ಪ್ರದೇಶದ ಭೋಗ್ನದಿಹ್ ಬಳಿ ಸಂಭವಿಸಿದ ಅಪಘಾತದಲ್ಲಿ ಎರಡು ರೈಲುಗಳ ಲೋಕೊ ಪೈಲಟ್‌ಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಸಾಹೇಬ್‌ಗಂಜ್‌ನ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಕಿಶೋರ್ ಟಿರ್ಕಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.