ADVERTISEMENT

ಮತದಾನದ ಹಕ್ಕು ಗೌರವಿಸಬೇಕು: ರಾಷ್ಟ್ರಪತಿ ಕೋವಿಂದ್‌

ಪಿಟಿಐ
Published 25 ಜನವರಿ 2021, 9:55 IST
Last Updated 25 ಜನವರಿ 2021, 9:55 IST
ಚುನಾವಣಾ ಆಯೋಗ ಆಯೋಜಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ರಾಮನಾಥ್‌ ಕೋವಿಂದ್‌
ಚುನಾವಣಾ ಆಯೋಗ ಆಯೋಜಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ರಾಮನಾಥ್‌ ಕೋವಿಂದ್‌   

ನವದೆಹಲಿ: ‘ಮತದಾನದ ಹಕ್ಕನ್ನು ಜನರು ಗೌರವಿಸಬೇಕು. ವಿಶ್ವದಾದ್ಯಂತ ಈ ಹಕ್ಕಿಗಾಗಿ ಹಲವರು ಹೋರಾಡಿದ್ದಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ತಿಳಿಸಿದರು.

11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ‘ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ, ಮತದಾನದ ಹಕ್ಕಿಗಾಗಿ ದಶಕಗಳ ಹೋರಾಟವನ್ನು ನಡೆಸಿದೆ’ ಎಂದರು.

‘ಬ್ರಿಟನ್‌ನಲ್ಲೂ ದೀರ್ಘ ಹೋರಾಟದ ಬಳಿಕ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದೆ. ಸ್ವಾತಂತ್ರ್ಯದ ಮೊದಲು ಭಾರತದಲ್ಲೂ ಇದೇ ಪರಿಸ್ಥಿತಿ ಇತ್ತು. ಆದರೆ ಸ್ವಾತಂತ್ರ್ಯದ ಬಳಿಕ 21 ವರ್ಷದ ಎಲ್ಲಾ ವಯಸ್ಕರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಯಿತು. ಬಳಿಕ ವಯೋಮಿತಿಯನ್ನು 18 ಕ್ಕೆ ಇಳಿಸಲಾಯಿತು’ ಎಂದು ಅವರು ಹೇಳಿದರು.

ADVERTISEMENT

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಕೂಡ ಈ ಹಕ್ಕನ್ನು ಪ್ರಮುಖ ಹಕ್ಕೆಂದು ಪರಿಗಣಿಸಿದ್ದರು. ಹಾಗಾಗಿ ಯುವ ಜನತೆ ಮತ ಚಲಾಯಿಸಿ, ಇತರರಿಗೂ ಪ್ರೇರಣೆಯಾಗಬೇಕು ಎಂದು ಅವರು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.