ADVERTISEMENT

ಬಿಹಾರ ಚುನಾವಣೆ | ‘ಸ್ಟ್ರಾಂಗ್‌ ರೂಮ್‌’ ಭದ್ರತೆ ಹೆಚ್ಚಿಸಲು ಆರ್‌ಜೆಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:22 IST
Last Updated 8 ನವೆಂಬರ್ 2025, 15:22 IST
ಮನೋಜ್ ಝಾ
ಮನೋಜ್ ಝಾ   

ನವದೆಹಲಿ: ಬಿಹಾರದಲ್ಲಿ ಮೊದಲ ಸುತ್ತಿನ ಮತದಾನಕ್ಕೆ ಬಳಸಿರುವ ಇವಿಎಂಗಳನ್ನು ಇಟ್ಟಿರುವ ‘ಸ್ಟ್ರಾಂಗ್‌ ರೂಮ್‌’ಗಳ ಭದ್ರತೆ ಹೆಚ್ಚಿಸಬೇಕೆಂದು ಕೋರಿ ಆರ್‌ಜೆಡಿಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಪತ್ರ ಬರೆದಿದೆ.

ಸ್ಟ್ರಾಂಗ್‌ರೂಂಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಕುರಿತ ವರದಿಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಭದ್ರತೆಗೆ ಸಂಬಂಧಿಸಿದಂತೆ ಇಲ್ಲಿ ಅನುಸರಿಸುತ್ತಿರುವ ಶಿಷ್ಟಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಚುನಾವಣಾ ಪ್ರಕ್ರಿಯೆಯ ಸಮಗ್ರತೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಧಾರವಾಗಿದೆ. ಚುನಾವಣೆಗಳ ಪಾವಿತ್ರ್ಯದ ವಿಷಯದಲ್ಲಿ ಸಾರ್ವಜನಿಕ ವಿಶ್ವಾಸವು ಸಂಪೂರ್ಣವಾಗಿ ಇವಿಎಂಗಳ ಪಾರದರ್ಶಕತೆ ಮತ್ತು ಸುರಕ್ಷತೆಯ ಮೇಲೆ ಅವಲಂಬಿತವಾಗಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ, ಸಂಸದ ಮನೋಜ್ ಝಾ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ‘ಸ್ಟ್ರಾಂಗ್‌ ರೂಮ್‌’ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ವರದಿಯಾಗಿರುವುದರಿಂದ ಈ ಪತ್ರ ಬರೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ವಿದ್ಯುತ್‌ ವ್ಯತ್ಯಯ ಘಟನೆಯು ಇವಿಎಂಗಳ ಭದ್ರತೆಯ ಬಗ್ಗೆ ‘ಗಂಭೀರ ಕಳವಳ’ ಉಂಟುಮಾಡಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.