ಪಟ್ನಾ: ಹೋಳಿ ಹಬ್ಬದ ಕಾರ್ಯಕ್ರಮದ ವೇಳೆ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕ ತೇಜ್ ಪ್ರತಾಪ್ ಯಾದವ್ ಅವರು ಪೊಲೀಸ್ ಸಿಬ್ಬಂದಿ ಒಬ್ಬರಿಗೆ ನೃತ್ಯ ಮಾಡುವಂತೆ ಹೇಳಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿ, ವೇದಿಕೆ ಮೇಲೆ ಮೈಕ್ ಹಿಡಿದು ಕುಳಿತುಕೊಂಡಿದ್ದ ತೇಜ್ ಪ್ರತಾಪ್ ಅವರು ಕೆಳಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯ ಬಳಿ ನೃತ್ಯ ಮಾಡುವಂತೆ ಹೇಳುತ್ತಾರೆ. ಆಗ ಆ ವ್ಯಕ್ತಿ ಕೈ ಮೇಲೆ ಎತ್ತಿ ಕುಣಿಯುವುದು ಕಾಣಬಹುದಾಗಿದೆ.
ಪಟ್ನಾದಲ್ಲಿರುವ ಯಾದವ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ.
ತೇಜ್ ಪ್ರತಾಪ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ಡಿ ದೇವಿಯ ಅವರ ಹಿರಿಯ ಮಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.