ADVERTISEMENT

ಕಣ್ಗಾವಲು ಕ್ಯಾಮೆರಾ:ಹೊಸದಾಗಿ ಟೆಂಡರ್ಆಹ್ವಾನಿಸಿದ ರೈಲ್ವೆ

ಪಿಟಿಐ
Published 14 ಜುಲೈ 2020, 12:59 IST
Last Updated 14 ಜುಲೈ 2020, 12:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕು ತಡೆಗೆ ಪೂರಕವಾದ ಕಣ್ಗಾವಲು ಕ್ಯಾಮೆರಾಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯು ಹೊಸದಾಗಿ ಟೆಂಡರ್ ಆಹ್ವಾನಿಸಿದೆ.

ಸಂಸ್ಥೆಗಳು ಪೂರೈಸುವ ಪ್ರತಿ ವಸ್ತು ಯಾವ ದೇಶದ್ದು ಎಂದು ನಮೂದಿಸಬೇಕು ಎಂದು ಹಿಂದೆ ವಿಧಿಸಲಾಗಿದ್ದ ಷರತ್ತನ್ನು ಕೈಬಿಡಲಾಗಿತ್ತು. ಈ ನಿಬಂಧನೆ ಚೀನಾ ಮೂಲದ ಕಂಪನಿಗೆ ವರವಾಗುವಂತಿದೆ ಎಂದು ಭಾರತೀಯ ಸಂಸ್ಥೆಗಳು ಆಕ್ಷೇಪಿಸಿದ್ದವು.

ರೈಲ್ವೆಯ ಸಾರ್ವಜನಿಕ ಸಂಸ್ಥೆಯಾದ ರೈಲ್‍ಟೆಲ್‍, ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಕಣ್ಗಾವಲು ಕ್ಯಾಮೆರಾಗಳಿಗೆ ಕಳೆದ ತಿಂಗಳು ಟೆಂಡರ್ ಕರೆದಿತ್ತು. ಆಕ್ಷೇಪದ ಹಿನ್ನೆಲೆಯಲ್ಲಿ ಎರಡು ವಾರದ ಹಿಂದೆ ಟೆಂಡರ್ ಅನ್ನು ರದ್ದುಪಡಿತ್ತು.

ADVERTISEMENT

ಟೆಂಡರ್ ಕರೆಯಲಾಗಿರುವ ಉದ್ದೇಶಿತ ಕ್ಯಾಮೆರಾಗಳು ದೇಹದ ತಾಪಮಾನವನ್ನು ಅಳೆಯಲಿದ್ದು, ಜೊತೆಗೆ ನಿರ್ದಿಷ್ಟ ವ್ಯಕ್ತಿ ಮಾಸ್ಕ್ ಧರಿಸಿದ್ದಾನೆಯೇ ಎಂಬುದನ್ನು ಗುರುತಿಸುವಂತದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.