ADVERTISEMENT

ರೋಹಿಂಗ್ಯಾಗಳು ನಿರಾಶ್ರಿತರೇ, ಅಕ್ರಮ ನುಸುಳುಕೋರರೇ?: ಸುಪ್ರೀಂ ಕೋರ್ಟ್

ಪಿಟಿಐ
Published 31 ಜುಲೈ 2025, 16:08 IST
Last Updated 31 ಜುಲೈ 2025, 16:08 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ರೋಹಿಂಗ್ಯಾ ಪ್ರಕರಣಗಳಲ್ಲಿ ಅವರು ನಿರಾಶ್ರಿತರೇ ಅಥವಾ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರೇ ಎಂದು ಮೊದಲು ನಿರ್ಧರಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌, ದೀಪಂಕರ್‌ ದತ್ತಾ ಮತ್ತು ಎನ್‌.ಕೋಟೀಶ್ವರ ಸಿಂಗ್‌ ಅವರ ನೇತೃತ್ವದ ನ್ಯಾಯಪೀಠವು, ಈ ವಿಚಾರವು ನಿರ್ಧಾರವಾದರೆ, ಉಳಿದ ವಿಚಾರಗಳನ್ನು ಸುಲಭವಾಗಿ  ಪರಿಹರಿಸಬಹುದು ಎಂದು ಹೇಳಿತು.

ADVERTISEMENT

ದೇಶದಲ್ಲಿನ ರೋಹಿಂಗ್ಯಾಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಕೆಯಾದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸಿತು.

‘ರೋಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಘೋಷಿಸುವ ಹಕ್ಕು ಇದೆಯೇ? ಇರುವುದೇ ಆದಲ್ಲಿ ಅವರಿಗೆ ಲಭ್ಯವಿರುವ ಸೌಲಭ್ಯಗಳು, ಹಕ್ಕುಗಳು ಯಾವುದು’ ಎಂದು ನ್ಯಾಯಪೀಠ ಪ್ರಶ್ನಿಸಿತು.

ರೋಹಿಂಗ್ಯಾಗಳು ಅಕ್ರಮವಾಗಿ ಪ್ರವೇಶಿಸಿದ್ದವರಾಗಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರ ಗಡೀಪಾರಿಗೆ ಕ್ರಮ ಕೈಗೊಳ್ಳುವುದು ಸಮರ್ಥನೀಯವೇ ಎಂದು ನ್ಯಾಯಾಲಯ ಕೇಳಿತು.

ರೋಹಿಂಗ್ಯಾಗಳು ಅಕ್ರಮ ನುಸುಳುಕೋರರಾಗಿದ್ದರೆ ಅವರನ್ನು ಅನಿರ್ದಿಷ್ಟಾವಧಿವರೆಗೆ ಬಂಧಿಸಬಹುದೇ ಅಥವಾ ಜಾಮೀನು ಮೂಲಕ ಬಿಡುಗಡೆ ಮಾಡಬಹುದೇ ಎಂದೂ ಪ್ರಶ್ನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.