ADVERTISEMENT

ಸಿಐಎಸ್‌ಎಫ್‌ ಭದ್ರತಾ ಸೇವೆಗಾಗಿ ವಿಮಾನ ಪ್ರಯಾಣಿಕರಿಂದ ₹2,430 ಕೋಟಿ ಸಂಗ್ರಹ

ಪಿಟಿಐ
Published 5 ಏಪ್ರಿಲ್ 2022, 12:35 IST
Last Updated 5 ಏಪ್ರಿಲ್ 2022, 12:35 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ (ಪಿಟಿಐ): ಕಳೆದ ಎರಡು ವರ್ಷಗಳಲ್ಲಿ ವಿಮಾನ ಪ್ರಯಾಣಿಕರಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ಒದಗಿಸುತ್ತಿರುವ ಭದ್ರತಾ ಸೇವೆಯ ಶುಲ್ಕವಾಗಿ ₹2,430 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಮಂಗಳವಾರ ಲೋಕಸಭೆಗೆ ತಿಳಿಸಿದರು.

ವಿಮಾನ ನಿಲ್ದಾಣಗಳಲ್ಲಿ ಸಿಐಎಸ್‌ಎಫ್‌ ಸಲ್ಲಿಸಿದ ಸೇವೆಗೆ ರಾಷ್ಟ್ರೀಯ ವಿಮಾನಯಾನ ಭದ್ರತಾ ಶುಲ್ಕ ಟ್ರಸ್ಟ್‌ನಲ್ಲಿ (ಎನ್‌ಎಸ್‌ಎಫ್‌ಟಿ) ಠೇವಣಿ ಮಾಡಲಾದವಿಮಾನಯಾನ ಭದ್ರತಾ ಶುಲ್ಕದ (ಎಎಸ್‌ಎಫ್‌) ರೂಪದಲ್ಲಿ ಸಂಗ್ರಹಿಸುವ ವಿಮಾನ ಪ್ರಯಾಣದ ಟಿಕೆಟ್‌ಗಳ ಶುಲ್ಕವನ್ನು ಪಾವತಿ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

2020ರ ಏಪ್ರಿಲ್‌ನಿಂದ 2021ರ ಡಿಸೆಂಬರ್‌ವರೆಗೆ ಎಎಸ್‌ಎಫ್‌ ರೂಪದಲ್ಲಿ ಒಟ್ಟು ₹2,430.48 ಕೋಟಿ ಸಂಗ್ರಹವಾಗಿದೆ. ಅದರಲ್ಲಿ ₹1885.74 ಕೋಟಿ ವೆಚ್ಚವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಲಿಖಿತ ಉತ್ತರ ನೀಡಿದರು.

ADVERTISEMENT

ಪ್ರಸ್ತುತ 30,996 ಸಿಐಎಸ್‌ಎಫ್‌ ಸಿಬ್ಬಂದಿ 65 ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.