ADVERTISEMENT

ಸಂಘವೇ ಸಮಾಜವಾಗಲಿದೆ: ಭಾಗವತ್‌

ಪಿಟಿಐ
Published 17 ಏಪ್ರಿಲ್ 2023, 16:30 IST
Last Updated 17 ಏಪ್ರಿಲ್ 2023, 16:30 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಬುರಹಾನ್‌ಪುರ, ಮಧ್ಯಪ್ರದೇಶ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರತಿಯೊಬ್ಬರನ್ನೂ ತನ್ನವರೆಂದು ಭಾವಿಸುತ್ತದೆ. ಸಂಘದ ವಿಸ್ತರಣೆಯು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಂದೊಂದು ದಿನ ಸಂಘವೇ ಒಂದು ಸಮಾಜವಾಗಿ ರೂಪುಗೊಳ್ಳಲಿದೆ. ಆಗ ಪ್ರತ್ಯೇಕ ಆರೆಸ್ಸೆಸ್‌ನ ಅಗತ್ಯವೇ ಇರುವುದಿಲ್ಲ’ ಎಂದು ಆರೆಸ್ಸೆಸ್ಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಸೋಮವಾರ ಹೇಳಿದ್ದಾರೆ.

ಹೆಡಗೇವಾರ್‌ ಸ್ಮಾರಕ ಸಮಿತಿಯ ಜಿಲ್ಲಾ ಕಚೇರಿ ಉದ್ಘಾಟಿಸಿದ ಬಳಿಕ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂಘವು ಇಡೀ ಸಮಾಜವನ್ನು ತನ್ನದೆಂದು ಭಾವಿಸುತ್ತದೆ. ಮುಂದೊಂದು ದಿನ ಇದು ಸಮಾಜದ ರೂಪ ತಳೆಯಲಿದೆ. ಆರೆಸ್ಸೆಸ್‌ ಕೈಗೊಂಡಿರುವ ಕೆಲಸಗಳು ಧರ್ಮ ರಕ್ಷಣೆ ಹಾಗೂ ಶಾಂತಿ ಪ್ರಿಯ ಜನರಲ್ಲಿ ಭದ್ರತೆಯ ಭಾವನೆ ಮೂಡಿಸುವ ಗುರಿಯನ್ನು ಹೊಂದಿವೆ. ಭಯೋತ್ಪಾದಕ ಮನಸ್ಥಿತಿಯುಳ್ಳವರಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನೂ ಒಳಗೊಂಡಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT