ADVERTISEMENT

ಆರ್‌ಎಸ್‌ಎಸ್ ನೀಡಿದ ಸೇವೆಗೆ ಟಿಬೆಟಿಯನ್ ಸಮುದಾಯ ಕೃತಜ್ಞವಾಗಿದೆ: ದಲೈ ಲಾಮಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 7:41 IST
Last Updated 2 ಅಕ್ಟೋಬರ್ 2025, 7:41 IST
   

ಮುಂಬೈ: ಟಿಬೆಟಿಯನ್ ನಿರಾಶ್ರಿತರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿಶೇಷ ಸೇವೆಗಳನ್ನು ಸಲ್ಲಿಸಿದೆ ಎಂದು ಟಿಬೆಟಿಯನ್ ಬೌದ್ಧ ಧರ್ಮಗುರು 14ನೇ ದಲೈಲಾಮಾ ಹೇಳಿದ್ದಾರೆ.

ಇಂದು (ಗುರುವಾರ) ನಾಗ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ವಿಜಯದಶಮಿ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಾಸಿಸುವ ಟಿಬೆಟಿಯನ್ ನಿರಾಶ್ರಿತರ ಕಲ್ಯಾಣ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಆರ್‌ಎಸ್‌ಎಸ್ ಆರಂಭದಿಂದಲೂ ವಿಶೇಷ ಸೇವೆಗಳನ್ನು ನೀಡಿದೆ. ಇದಕ್ಕಾಗಿ ಇಡೀ ಟಿಬೆಟಿಯನ್ ಸಮುದಾಯವು ಕೃತಜ್ಞವಾಗಿದೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ನೂರು ವರ್ಷಗಳ ಪ್ರಯಾಣವು ಸಮರ್ಪಣೆ ಮತ್ತು ಸೇವೆಗೆ ಸಾಟಿಯಿಲ್ಲದ ಉದಾಹರಣೆಯಾಗಿದೆ. ಸಂಘವು ನಿರಂತರವಾಗಿ ಜನರನ್ನು ಒಗ್ಗೂಡಿಸಲು ಕೆಲಸ ಮಾಡಿದೆ. ಭಾರತವನ್ನು ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಪಡಿಸಲು, ದೂರದ ಮತ್ತು ಸವಾಲಿನ ಪ್ರದೇಶಗಳಲ್ಲಿ ಕೆಲಸ ಮಾಡಿದೆ. ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಿದೆ ಎಂದೂ ಅವರು ಸ್ಮರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.