ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ’ ಯೋಜನೆಯಿಂದ ₹455 ಕೋಟಿ ‘ನಾಪತ್ತೆ’ ಆಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
‘ಆರ್‌ಟಿಐ ಅರ್ಜಿಯಡಿ ಈ ಸಂಬಂಧ ಬಹಿರಂಗವಾಗಿರುವ ಮಾಹಿತಿಯು ಕೇಂದ್ರ ಸರ್ಕಾರದ ಸುಳ್ಳುಗಳನ್ನು ಬಯಲು ಮಾಡಿದೆ’ ಎಂದು ಅವರು ‘ಎಕ್ಸ್’ನಲ್ಲಿ ಟೀಕಿಸಿದ್ದಾರೆ.
‘ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದ ಅವಧಿಯಲ್ಲಿ ಹಾಗೂ ಕೆಲವೊಮ್ಮೆ ಬಿಜೆಪಿಯ ಗೂಂಡಾಗಳಿಂದಲೇ ದೌರ್ಜನ್ಯದಿಂದ ಬಳಲಿರುವ ಹೆಣ್ಣುಮಕ್ಕಳ ನೋವನ್ನು, ‘ಮಹಿಳೆ ಮೇಲಿನ ದೌರ್ಜನ್ಯ ಸಾಕು’ ಎಂಬ ಬಿಜೆಪಿ ಸರ್ಕಾರದ ಜಾಹೀರಾತು ಅಣಕಿಸುವಂತಿದೆ ಎಂದೂ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.