ADVERTISEMENT

ಚೀನಾಕ್ಕೆ ರಷ್ಯಾ ವಿದೇಶಾಂಗ ಸಚಿವ ಭೇಟಿ

ಏಜೆನ್ಸೀಸ್
Published 8 ಏಪ್ರಿಲ್ 2024, 13:34 IST
Last Updated 8 ಏಪ್ರಿಲ್ 2024, 13:34 IST
 ಸೆರ್ಗೆ ಲಾವ್ರೋವ್‌ 
 ಸೆರ್ಗೆ ಲಾವ್ರೋವ್‌    

ಬೀಜಿಂಗ್‌: ರಷ್ಯಾ ಮತ್ತು ಚೀನಾ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲಾವ್ರೋವ್‌ ಅವರು ಸೋಮವಾರ ಬೀಜಿಂಗ್‌ಗೆ ಭೇಟಿ ನೀಡಿದರು.

ಸಚಿವರು ಉಕ್ರೇನ್‌, ಏಷ್ಯಾ–ಪೆಸಿಫಿಕ್‌ ಪ್ರದೇಶದ ಸ್ಥಿತಿಗತಿ, ದ್ವಿಪಕ್ಷೀಯ ಸಹಕಾರ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂದು ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಲಾವ್ರೋವ್‌ ಅವರು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.

ಉಭಯ ದೇಶಗಳು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಅಮೆರಿಕದ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿವೆ. ಚೀನಾ ಬೆಂಬಲಿತ ರಷ್ಯಾವು, ಪಾಶ್ಚಿಮಾತ್ಯ ದೇಶಗಳ ಪ್ರಚೋದನೆಯಿಂದಾಗಿಯೇ 2022ರಲ್ಲಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹತ್ಯೆ ಯತ್ನ ನಡೆಯಿತು ಎಂದು ಹೇಳಿದೆ. ಆದರೆ, ಈ ಆರೋಪಕ್ಕೆ ಪೂರಕವಾದ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವನ್ನೂ ಅದು ಒದಗಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.