ADVERTISEMENT

Sabarimala ಚಿನ್ನ ನಾಪತ್ತೆ ಪ್ರಕರಣ | ಪದ್ಮಕುಮಾರ್ 2 ದಿನ SIT ವಶಕ್ಕೆ: ಕೇರಳ HC

ಪಿಟಿಐ
Published 26 ನವೆಂಬರ್ 2025, 9:19 IST
Last Updated 26 ನವೆಂಬರ್ 2025, 9:19 IST
<div class="paragraphs"><p>ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ</p></div>

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ

   

ಪಿಟಿಐ ಚಿತ್ರ

ಕೊಲ್ಲಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್‌ ಅವರನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ 2 ದಿನಗಳ ಅವಧಿಗೆ ನೀಡಿ ಕೇರಳ ಹೈಕೋರ್ಟ್ ಆದೇಶಿಸಿದೆ.

ADVERTISEMENT

ಮಾಜಿ ಶಾಸಕರೂ ಆದ ಸಿಪಿಐ(ಎಂ)ನ ಮುಖಂಡ ಪದ್ಮಕುಮಾರ ಅವರನ್ನು ವಶಕ್ಕೆ ಪಡೆದಿದ್ದ ಎಸ್‌ಐಟಿ, ಅಪರಾಧ ವಿಭಾಗದ ಕಚೇರಿಯಲ್ಲಿ ವಿಚಾರಣೆ ನಡೆಸಿತ್ತು. 

ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳನ್ನು ಚಿನ್ನ ಲೇಪನಕ್ಕಾಗಿ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೋಟಿ ಅವರಿಗೆ ಹಸ್ತಾಂತರಿಸುವ ಪ್ರಸ್ತಾವವನ್ನು ಮಂಡಳಿಯು ಪರಿಗಣಿಸಿದ್ದ 2019ರ ಸಂದರ್ಭದಲ್ಲಿ ಅವರು ಟಿಡಿಬಿ ಅಧ್ಯಕ್ಷರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಚಿನ್ನ ಲೇಪಿತ ತಾಮ್ರದ ಕವಚಗಳನ್ನು ಪೋಟಿ ಅವರಿಗೆ ಹಸ್ತಾಂತರಿಸಿದಾಗ ತಾನು ಮಂಡಳಿಯ ಅಧ್ಯಕ್ಷನಾಗಿರಲಿಲ್ಲ ಎಂದು ಪದ್ಮಕುಮಾರ್‌ ವಾದಿಸುತ್ತಿದ್ದಾರೆ. ಆದರೆ, ಅವರ ಅಧಿಕಾರಾವಧಿಯಲ್ಲಿ ಈ ಪ್ರಸ್ತಾವವನ್ನು ಜಾರಿಗೊಳಿಸಲಾಗಿದೆ’ ಎಂದು ಎಸ್‌ಐಟಿ ಹೇಳಿದೆ.

ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚಗಳು ಮತ್ತು ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟು ಪ್ರಕರಣಗಳನ್ನು ಎಸ್ಐಟಿ ನಡೆಸುತ್ತಿದೆ. ಈವರೆಗೂ ಆರು ಜನರನ್ನು ಎಸ್‌ಐಟಿ ಬಂಧಿಸಿದೆ. ಇದರಲ್ಲಿ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಅವರೂ ಒಬ್ಬರು. ತಂತ್ರಿಗಳಾದ ಕಂಡರಾರು ಮೋಹನಾರು ಮತ್ತು ಕಂಡರಾರು ರಜೀವಾರು ಅವರ ಹೇಳಿಕೆಗಳನ್ನೂ ದಾಖಲಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.