ADVERTISEMENT

ಕಾಜಿರಂಗ ಉದ್ಯಾನವನಕ್ಕೆ ಪತ್ನಿ, ಪುತ್ರಿಯೊಂದಿಗೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್

ಪಿಟಿಐ
Published 9 ಏಪ್ರಿಲ್ 2025, 3:01 IST
Last Updated 9 ಏಪ್ರಿಲ್ 2025, 3:01 IST
<div class="paragraphs"><p>ಕಾಜಿರಂಗ ಉದ್ಯಾನವನಕ್ಕೆ ಭೇಟಿ&nbsp; ಸಚಿನ್ ತೆಂಡೂಲ್ಕರ್ ಭೇಟಿ ನೀಡಿದರು.</p></div>

ಕಾಜಿರಂಗ ಉದ್ಯಾನವನಕ್ಕೆ ಭೇಟಿ  ಸಚಿನ್ ತೆಂಡೂಲ್ಕರ್ ಭೇಟಿ ನೀಡಿದರು.

   

ಪಿಟಿಐ ಚಿತ್ರ 

ಗುವಾಹಟಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಮೀಸಲು ಪ್ರದೇಶಗಳಿಗೆ ಭೇಟಿ ನೀಡಿ ಕಾಲಕಳೆದರು.

ADVERTISEMENT

ಅಸ್ಸಾಂ ಮತ್ತು ಮೇಘಾಲಯ ಪ್ರವಾಸದಲ್ಲಿರುವ ತೆಂಡೂಲ್ಕರ್, ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಸೋಮವಾರ ಕಾಜಿರಂಗಕ್ಕೆ ಭೇಟಿ ನೀಡಿದ್ದರು.

ಹುಲಿ ಮೀಸಲು ಪ್ರದೇಶಗಳಲ್ಲಿ ತೆಂಡೂಲ್ಕರ್ ಜೀಪ್‌ ಸಫಾರಿ ಮಾಡಿದರು. ಪಶ್ಚಿಮ ಬಾಗೋರಿ ಮತ್ತು ಕೇಂದ್ರ ಕೊಹೊರಾದ ಹುಲಿ ಮೀಸಲು ಪ್ರದೇಶಗಳಲ್ಲಿ ರಾಯಲ್ ಬಂಗಾಳದ ಹುಲಿಗಳನ್ನು ವೀಕ್ಷಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭೇಟಿ ವೇಳೆ ಮಾವುತರರು ಸೇರಿದಂತೆ ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಕೆಲ ಕಾಲ ಸಂವಾದ ನಡೆಸಿದರು.

ಅರಣ್ಯ ಸಿಬ್ಬಂದಿಯೊಂದಿಗೆ ಸಚಿನ್

ಇಂದು (ಬುಧವಾರ) ಗುವಾಹಟಿ ತಲುಪಿ ಪ್ರಸಿದ್ಧ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.