ADVERTISEMENT

ಕೃಷಿ ಮಸೂದೆ: ರಸ್ತೆ ತಡೆದು ಪ್ರತಿಭಟನೆಗೆ ಶಿರೋಮಣಿ ಅಕಾಲಿ ದಳ ಕರೆ

ಪಿಟಿಐ
Published 23 ಸೆಪ್ಟೆಂಬರ್ 2020, 7:28 IST
Last Updated 23 ಸೆಪ್ಟೆಂಬರ್ 2020, 7:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಕೃಷಿ ಮಸೂದೆ ವಿರೋಧಿಸಿ ಇದೇ 25 ರಂದುಪಂಜಾಬ್‌ನಲ್ಲಿ ರಸ್ತೆಗಳಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸುವುದಾಗಿ ಶಿರೋಮಣಿ ಅಕಾಲಿ ದಳ ಮಂಗಳವಾರ ಹೇಳಿದೆ.

ರೈತ ವಿರೋಧಿ ಮಸೂದೆಗಳ ಅಂಗೀಕಾರವನ್ನು ವಿರೋಧಿಸಿ ಶುಕ್ರವಾರ ಪಂಜಾಬ್‌ನಲ್ಲಿ ‘ಚಕ್ಕಾ ಜಾಮ್’ (ರಸ್ತೆ ದಿಗ್ಬಂಧನ) ನಡೆಸಲು ನಿರ್ಧರಿಸಲಾಗಿದೆ. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು, ರೈತರು ಸೇರಿದಂತೆ ಇತರರು ಅಂದು ಬೆಳಿಗ್ಗೆ 11 ಗಂಟೆಯಿಂದ ಮೂರು ಗಂಟೆಗಳ ಕಾಲ ರಸ್ತೆ ತಡೆದು ಶಾಂತಿಯುತವಾಗಿ ಪ್ರತಿಭಟಿಸಲಿದ್ದಾರೆ ಎಂದು ಎಸ್‌ಎಡಿ ನಾಯಕ ದಲ್ಜಿತ್ ಸಿಂಗ್ ಚೀಮ ತಿಳಿಸಿದರು.

ಇದೇ 26ರಿಂದ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ನಾಲ್ಕು ದಿನಗಳ ಜಾಗೃತಿ ಕಾರ್ಯಕ್ರಮ ನಡೆಸಲಿದ್ದಾರೆ. ಈ ವೇಳೆ ಅವರು ಕೃಷಿ ಮಸೂದೆಯಿಂದ ರೈತರ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಈಗಾಗಲೇಕೃಷಿ ಮಸೂದೆಯನ್ನು ವಿರೋಧಿಸಿಪಂಜಾಬ್‌ನ 30 ರೈತ ಸಂಘಟನೆಗಳು ರಾಜ್ಯದಲ್ಲಿ ಸಂಪೂರ್ಣ ಮುಷ್ಕರಕ್ಕೆ ಕರೆ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.