ADVERTISEMENT

ಸಿದ್ದಲಿಂಗಯ್ಯ ನಿಧನದಿಂದ ಭಾರತೀಯ ಸಾಹಿತ್ಯ, ದಲಿತ ಸಮುದಾಯಕ್ಕೆ ನಷ್ಟ: ಮಮತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2021, 8:33 IST
Last Updated 12 ಜೂನ್ 2021, 8:33 IST
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)
ಮಮತಾ ಬ್ಯಾನರ್ಜಿ (ಪಿಟಿಐ ಚಿತ್ರ)   

ಬೆಂಗಳೂರು: ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿದ್ದಲಿಂಗಯ್ಯ ಅವರ ನಿಧನವು ಭಾರತೀಯ ಸಾಹಿತ್ಯಕ್ಕೆ ಮತ್ತು ದಲಿತ ಸಮುದಾಯಕ್ಕೆ ನಷ್ಟ ಎಂದು ಮಮತಾ ಹೇಳಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಮಮತಾ, ‘ಕವಿ, ಹೋರಾಟಗಾರ ಸಿದ್ದಲಿಂಗಯ್ಯ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು. ಬಂಡಾಯ ಸಾಹಿತ್ಯ, ಅವರ ಕ್ರಾಂತಿಕಾರಿ ಕಾವ್ಯ, ದಲಿತ ರಾಜಕೀಯದಲ್ಲಿನ ಅವರ ಪಾತ್ರ ಮತ್ತು ದಲಿತರ ಹಕ್ಕುಗಳಿಗೆ ದನಿಯಾಗಿದ್ದಾಗಿ ಅವರನ್ನು ಸದಾ ಸ್ಮರಿಸಲಾಗುತ್ತದೆ,‘ ಎಂದಿದ್ದಾರೆ.

ADVERTISEMENT

‘ಸಿದ್ದಲಿಂಗಯ್ಯ ಅವರ ನಿಧನದಿಂದ ಭಾರತೀಯ ಸಾಹಿತ್ಯ ಪರಂಪರೆಗೆ ಮತ್ತು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ,‘ ಎಂದು ಮಮತಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.