ಸಜ್ಜನ್ ಕುಮಾರ್
ನವದೆಹಲಿ: 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದ ಅಪರಾಧಿ, ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಪ್ರಕರಣ ನಡೆದುಬಂದ ಹಾದಿ
1991: ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲು
1994 ಜುಲೈ 8: ಕಾನೂನು ಕ್ರಮವನ್ನು ಆರಂಭಿಸಲು ದೆಹಲಿ ನ್ಯಾಯಾಲಯಕ್ಕೆ ಯಾವುದೇ ಸರಿಯಾದ ಸಾಕ್ಷ್ಯ ಸಿಗಲಿಲ್ಲ. ಚಾರ್ಜ್‌ಶೀಟ್‌ನಲ್ಲಿಯೂ ಸಜ್ಜನ್ ಕುಮಾರ್ ಹೆಸರು ಉಲ್ಲೇಖವಾಗಿರಲಿಲ್ಲ.
2015 ಫೆ.12: ಸರ್ಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ
2016 ನ.21: ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಎಸ್‌ಐಟಿ ಕೋರ್ಟ್‌ಗೆ ತಿಳಿಸಿತ್ತು.
2021 ಏ.6: ಪ್ರಕರಣದಲ್ಲಿ ಸಜ್ಜನ್ ಕುಮಾರ್ ಬಂಧನ
2021 ಮೇ 5: ಸಜ್ಜನ್ ಕುಮಾರ್ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ ಪೊಲೀಸರು
2021 ಜುಲೈ 26: ಚಾರ್ಜ್‌ಶೀಟ್ ಪಡೆದು ಗಮನಿಸಿದ ಕೋರ್ಟ್
2021 ಅ.1: ಚಾರ್ಜ್‌ಶೀಟ್ ಆಧರಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಿತು
2021 ಡಿ.16: ಹತ್ಯೆ, ಗಲಭೆ ಮತ್ತು ಇತರ ಅಪರಾಧಗಳ ಬಗ್ಗೆ ಆರೋಪ ಪಟ್ಟಿ ರೂಪಿಸಿದ ಕೋರ್ಟ್
2024 ಜ.31: ನ್ಯಾಯಾಲಯದಲ್ಲಿ ಕೊನೆಯ ಹಂತ ವಿಚಾರಣೆ ಆರಂಭ
2024 ನ.8: ತೀರ್ಪು ಕಾಯ್ದಿರಿಸಿದ್ದ ಕೋರ್ಟ್
2025 ಫೆ.12: ಪ್ರಕರಣದಲ್ಲಿ ಸಜ್ಜನ್ ಕುಮಾರ್ ದೋಷಿ ಎಂದ ನ್ಯಾಯಾಲಯ
ಫೆ.25: ಪ್ರಕರಣದಲ್ಲಿ ಸಜ್ಜ್‌ನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟ
ಸಿಖ್ ದಂಗೆ ಪ್ರಕರಣದ ತನಿಖೆ ನಡೆಸಲು ರಚಿಸಿದ್ದ ನಾನಾವತಿ ಸಮಿತಿ ಪ್ರಕಾರ, ಗಲಭೆಗೆ ಸಂಬಂಧಿಸಿದಂತೆ ಒಟ್ಟು 587 ಎಫ್‌ಐಆರ್‌ಗಳು ದಾಖಲಾಗಿದ್ದವು ಮತ್ತು ಗಲಭೆಯಲ್ಲಿ 2,733 ಜನ ಮೃತಪಟ್ಟಿದ್ದರು. ಇವುಗಳಲ್ಲಿ 240 ಎಫ್‌ಐಆರ್‌ಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ ಎಂದು ಪ್ರಕರಣ ಮುಚ್ಚಲಾಗಿದೆ ಹಾಗೂ 250 ಪ್ರಕರಣಗಳನ್ನು ಖುಲಾಸೆಗೊಳಿಸಿದೆ.
587 ಎಫ್‌ಐಆರ್‌ಗಳ ಪೈಕಿ ಕೇವಲ 28 ಪ್ರಕರಣಗಳಲ್ಲಿರುವವರು ಅಪರಾಧಿಗಳು ಎಂದು ಸಾಬೀತಾಗಿದ್ದು 400 ಜನರು ಅಪರಾಧಿಗಳಾಗಿದ್ದಾರೆ. ಇದರಲ್ಲಿ ಸಜ್ಜನ್ ಕುಮಾರ್ ಸೇರಿ 50 ಜನರು ಕೊಲೆ ಪ್ರಕರಣದಲ್ಲಿ ದೋಷಿಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.