ADVERTISEMENT

‘ಸಕೀನಾಳ ಮುತ್ತು’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಪಿಟಿಐ
Published 4 ಸೆಪ್ಟೆಂಬರ್ 2023, 13:47 IST
Last Updated 4 ಸೆಪ್ಟೆಂಬರ್ 2023, 13:47 IST
   

ನವದೆಹಲಿ: ಸಾಹಿತಿ ವಿವೇಕ ಶಾನಭಾಗ ಅವರ ‘ಸಕೀನಾಳ ಮುತ್ತು’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ‘ಪೆಂಗ್ವಿನ್‌ ರ್‍ಯಾಂಡಮ್‌ ಹೌಸ್‌ ಇಂಡಿಯಾ (ಪಿಆರ್‌ಎಚ್‌ಐ)’ ಈ ಕೃತಿಯನ್ನು ಪ್ರಕಟಿಸಿದೆ. 

‘ಸಕೀನಾಸ್‌ ಕಿಸ್‌’ ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಕಾದಂಬರಿಯನ್ನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀನಾಥ್‌ ಪೆರೂರು ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಸದ್ಯ ಕೆಲವು ಪುಸ್ತಕದ ಅಂಗಡಿಗಳಲ್ಲಿ ಬುಕ್ಕಿಂಗ್‌ ನಡೆಯುತ್ತಿದೆ. ಮುಂದಿನ ವಾರ ಇ–ಕಾಮರ್ಸ್‌ ವೇದಿಕೆಯಲ್ಲಿ ಲಭ್ಯವಾಗಲಿದೆ ಎಂದು ಪ್ರಕಾಶಕ ಸಂಸ್ಥೆ ಪಿಆರ್‌ಎಚ್‌ಐ ತಿಳಿಸಿದೆ.  

‘ಜಗತ್ತು ವಿಸ್ಮಯಕಾರಿಯಾಗಿ ಕೆಲಸ ಮಾಡುತ್ತದೆ. ನನ್ನ ಬರವಣಿಗೆ ಇದನ್ನು ನನಗೆ ದೃಢಪಡಿಸಿದೆ. ಕಾದಂಬರಿಯ ಅನುವಾದ ಮಾಡಿರುವ  ಶ್ರೀನಾಥ್ ಪೆರೂರು ಅವರ ಉದಾರತೆಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಶಾನಭಾಗ ಹೇಳಿದ್ದಾರೆ. 

ADVERTISEMENT

ಸತ್ಯ ಮತ್ತು ಗ್ರಹಿಕೆಯ ನಡುವಿನ ಅಂತರವನ್ನು ಪ್ರಶ್ನಿಸುವ, ಸಾಹಿತ್ಯಕ ಮೇರುಕೃತಿ ಎಂಬ ಮನ್ನಣೆಗೆ ಪಾತ್ರವಾಗಿರುವ ಈ ಕಾದಂಬರಿಯು 2021ರಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದು ಓದುಗರನ್ನು ವ್ಯಾಪಕವಾಗಿ ಆಕರ್ಷಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.