ADVERTISEMENT

ಮುಂಬೈ: ಸಿಬಿಐ ವಿಚಾರಣೆಗೆ ಸಮೀರ್ ವಾಂಖೆಡೆ ಹಾಜರು

ಪಿಟಿಐ
Published 20 ಮೇ 2023, 11:27 IST
Last Updated 20 ಮೇ 2023, 11:27 IST
ಸಮೀರ್ ವಾಂಖೆಡೆ(ಚಿತ್ರ: ಐಎಎನ್‌ಎಸ್‌)
ಸಮೀರ್ ವಾಂಖೆಡೆ(ಚಿತ್ರ: ಐಎಎನ್‌ಎಸ್‌)   

ಮುಂಬೈ: ‘ಎನ್‌ಸಿಬಿಯ ಮುಂಬೈ ವಲಯದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆ ಅವರು ಶನಿವಾರ ಸಿಬಿಐ ವಿಚಾರಣೆಗೆ ಹಾಜರಾದರು’ ಎಂದು ಅಧಿಕಾರಿಗಳು ತಿಳಿಸಿದರು.

ಮುಂಬೈನ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಆರ್ಯನ್‌ ಖಾನ್‌  ಅವರನ್ನು ಸಿಕ್ಕಿಹಾಕಿಸದಿರಲು ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರ ಬಳಿ ₹ 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವಾಂಖೆಡೆ ಆರೋಪಿಯಾಗಿದ್ದಾರೆ.

‘ಸಿಬಿಐ ಕಚೇರಿಗೆ ಬೆಳಿಗ್ಗೆ 10.15ಕ್ಕೆ ವಾಂಖೆಡೆ ಆಗಮಿಸಿದರು. ಈ ವೇಳೆ ಮಾಧ್ಯಮದವರ ಮುಂದೆ, ಸತ್ಯಮೇವ ಜಯತೆ ಎಂದಷ್ಟೇ ಹೇಳಿ ಕಚೇರಿ ಒಳಗೆ ಹೋದರು’ ಎಂದು ಅವರು ಹೇಳಿದರು.

ADVERTISEMENT

ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಿಬಿಐ ವಾಂಖೆಡೆ ಅವರಿಗೆ ಗುರುವಾರವೇ ಸಮನ್ಸ್‌ ನೀಡಿತ್ತು. ಆದರೆ ಅವರು ಅಂದಿನ ದಿನ ವಿಚಾರಣೆಗೆ ಹಾಜರಾಗಿರಲಿಲ್ಲ.

ಈ ಪ್ರಕರಣ ಮಾತ್ರವಲ್ಲದೇ, ಎನ್‌ಸಿಬಿಯ ದೂರನ್ನು ಆಧರಿಸಿ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಅಪರಾಧ ಸಂಚು ನಡೆಸಿದ ಹಾಗೂ ಲಂಚಕ್ಕಾಗಿ ಬೆದರಿಕೆ ಒಡ್ಡಿದ್ದಕ್ಕೆ ಸಂಬಂಧಿಸಿದಂತೆ, ವಾಂಖೆಡೆ ವಿರುದ್ಧ ಸಿಬಿಐ ಇನ್ನೂ ನಾಲ್ಕು ಪ್ರಕರಣಗಳನ್ನು ಮೇ 11ರಂದು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.