ADVERTISEMENT

ರೈತರ ಬೇಡಿಕೆ ಈಡೇರಿಸುವಲ್ಲಿ ಕೇಂದ್ರ ವಿಫಲ: ಎಸ್‌ಕೆಎಂನಿಂದ ಆಂದೋಲನದ ಎಚ್ಚರಿಕೆ

ಪಿಟಿಐ
Published 4 ಜುಲೈ 2022, 8:26 IST
Last Updated 4 ಜುಲೈ 2022, 8:26 IST
ದೆಹಲಿಯ ಹೊರವಲಯದಲ್ಲಿ ವರ್ಷಕ್ಕೂ ಅಧಿಕ ಸಮಯ ಪ್ರತಿಭಟನೆ ನಡೆಸಿದ್ದ ರೈತರು – ಪಿಟಿಐ ಚಿತ್ರ
ದೆಹಲಿಯ ಹೊರವಲಯದಲ್ಲಿ ವರ್ಷಕ್ಕೂ ಅಧಿಕ ಸಮಯ ಪ್ರತಿಭಟನೆ ನಡೆಸಿದ್ದ ರೈತರು – ಪಿಟಿಐ ಚಿತ್ರ    

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ 9ರಂದು ಪ್ರತಿಭಟನೆ ಹಿಂತೆಗೆದುಕೊಳ್ಳುವ ಮುನ್ನ ನಮಗೆ ಲಿಖಿತ ರೂಪದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರವು ಈಡೇರಿಸಿಲ್ಲ ಎಂದು ರೈತ ಸಂಘಟನೆ ‘ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)’ ಆರೋಪಿಸಿದೆ.

’ಸರ್ಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಸಮಿತಿಯನ್ನು ರಚಿಸಿಲ್ಲ. ರೈತರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆದಿಲ್ಲ’ ಎಂದು ಎಸ್‌ಕೆಎಂ ಆರೋಪಿಸಿದೆ.

‘ರೈತರ ದೊಡ್ಡ ಬೇಡಿಕೆಯಾದ ಎಂಎಸ್‌ಪಿಯ ಕಾನೂನು ಖಾತರಿಯನ್ನು ಪರಿಗಣಿಸಲು ಸರ್ಕಾರ ಸಿದ್ಧವಿಲ್ಲ’ ಎಂದು ಅದು ಆರೋಪಿಸಿದೆ.

ADVERTISEMENT

ಸಂಸತ್ತಿನ ಮುಂಗಾರು ಅಧಿವೇಶನ ನಡೆಯುವ ಜುಲೈ 18ರಿಂದ 31ರ ವರೆಗೆ ‘ದ್ರೋಹದ ವಿರುದ್ಧ ಪ್ರತಿಭಟನೆ’ ಎಂಬ ಹೆಸರಿನಲ್ಲಿ ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ಮತ್ತೆ ಆಂದೋಲನವನ್ನು ಪ್ರಾರಂಭಿಸಲಾಗುವುದು ಎಂದು ಸಂಘಟನೆ ಎಚ್ಚರಿಸಿದೆ.

ಈ ಅಭಿಯಾನದ ಕೊನೆಯಲ್ಲಿ ಜುಲೈ 31 ರಂದು ದೇಶದಾದ್ಯಂತ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಎಲ್ಲಾ ಪ್ರಮುಖ ಹೆದ್ದಾರಿಗಳನ್ನು ತಡೆದು ‘ಚಕ್ಕಾ ಜಾಮ್’ ಮಾಡಲಾಗುವುದು ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.