ADVERTISEMENT

‘ಜನೌಷಧಿ ಕೇಂದ್ರಗಳಲ್ಲಿ ₹1ಕ್ಕೆ ಸ್ಯಾನಿಟರಿ ನ್ಯಾಪ್‌ಕಿನ್’

ಪಿಟಿಐ
Published 26 ಆಗಸ್ಟ್ 2019, 14:49 IST
Last Updated 26 ಆಗಸ್ಟ್ 2019, 14:49 IST
   

ನವದೆಹಲಿ: ದೇಶದ ಜನೌಷಧಿ ಕೇಂದ್ರಗಳಲ್ಲಿ ದೊರಕುತ್ತಿರುವ ‘ಸುವಿಧಾ’ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ದರವನ್ನು ಶೇ 60ರಷ್ಟು ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

‘ಪ್ರಸ್ತುತ ಜನೌಷಧಿ ಕೇಂದ್ರಗಳಲ್ಲಿ ಪ್ರತಿ ಸ್ಯಾನಿಟರಿ ನ್ಯಾಪ್‌ಕಿನ್ ಬೆಲೆ ₹ 2.50 ಇದ್ದು, ಇದನ್ನು ₹1ಕ್ಕೆ ಇಳಿಸಲಾಗುತ್ತಿದೆ. 4 ನ್ಯಾಪ್‌ಕಿನ್‌ಗಳ ಒಂದು ಪ್ಯಾಕ್‌, ₹10ಕ್ಕೆ ದೊರಕುತ್ತಿತ್ತು. ಇನ್ನುಮುಂದೆ ಕೇವಲ ₹4ಕ್ಕೆ ದೊರಕಲಿದೆ. ದೇಶದಾದ್ಯಂತ 5,500 ಜನೌಷಧಿ ಕೇಂದ್ರಗಳಲ್ಲಿ ಮಂಗಳವಾರದಿಂದಲೇ ನೂತನ ದರ ಜಾರಿಗೆ ಬರಲಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‌ಸುಖ್ ಮಾಂಡವೀಯ ತಿಳಿಸಿದ್ದಾರೆ.

ADVERTISEMENT

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ನ್ಯಾಪ್‌ಕಿನ್‌ ದರ ₹6–8 ಇದೆ.

‘ದರ ಇಳಿಕೆ ಮಾಡುವ ಸಲುವಾಗಿ, ನ್ಯಾಪ್‌ಕಿನ್ ಒದಗಿಸುತ್ತಿರುವ ತಯಾರಕರಿಗೆ ಸಹಾಯಧನ ನೀಡಲಾಗುವುದು. ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ಯೋಜನೆ ಮೇ 2018ರಿಂದ ಜಾರಿಗೆ ಬಂದಿದೆ. ಒಂದು ವರ್ಷದಲ್ಲಿ ಅಂದಾಜು 2.2 ಕೋಟಿ ನ್ಯಾಪ್‌ಕಿನ್‌ಗಳು ಮಾರಾಟವಾಗಿದ್ದು, ಇದೀಗ ದರ ಇಳಿಕೆ ಮಾಡಿರುವುದರಿಂದ ಮಾರಾಟ ಪ್ರಮಾಣ ದುಪ್ಪಟ್ಟಾಗುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.