ADVERTISEMENT

ಮಾದಕದ್ರವ್ಯ ವಿರೋಧಿ ಅಭಿಯಾನ: ಸಂಜಯ್‌ ದತ್‌ ರಾಯಭಾರಿ

ಪಿಟಿಐ
Published 1 ಸೆಪ್ಟೆಂಬರ್ 2018, 11:27 IST
Last Updated 1 ಸೆಪ್ಟೆಂಬರ್ 2018, 11:27 IST
ಸಂಜಯ್‌ ದತ್‌ (ಸಂಗ್ರಹ ಚಿತ್ರ)
ಸಂಜಯ್‌ ದತ್‌ (ಸಂಗ್ರಹ ಚಿತ್ರ)   

ಡೆಹ್ರಾಡೂನ್: ಉತ್ತರದ ಆರು ರಾಜ್ಯಗಳಲ್ಲಿ ನಡೆಯಲಿರುವ ಮಾದಕದ್ರವ್ಯ ವಿರೋಧಿ ಅಭಿಯಾನದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಪಾಲ್ಗೊಳ್ಳಲಿದ್ದಾರೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

‘ವೃತ್ತಿಜೀವನದ ಆರಂಭದಲ್ಲಿ ನಾನು ಮಾದಕ ವ್ಯಸನಿಯಾಗಿ ತೊಂದರೆ ಅನುಭವಿಸಿದ್ದೆ. ಈ ಕಾರಣಕ್ಕೆ ಅಭಿಯಾನದಲ್ಲಿ ರಾಯಭಾರಿಯಾಗಿ ಪಾಲ್ಗೊಳ್ಳುತ್ತೇನೆ’ ಎಂದು ಸಂಜಯ್‌ ದತ್‌ ತಿಳಿಸಿರುವುದಾಗಿ ತ್ರಿವೇಂದ್ರ ಸಿಂಗ್‌ ಹೇಳಿದ್ದಾರೆ.

ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್‌, ಹರಿಯಾಣ, ದೆಹಲಿ ಮತ್ತು ರಾಜಸ್ಥಾನದಲ್ಲಿ ಅಭಿಯಾನ ನಡೆಯಲಿದೆ.

ADVERTISEMENT

ಕೇಂದ್ರಾಡಳಿತ ಪ್ರದೇಶವಾದ ಚಂಡಿಗಡ ಕೂಡ ಮಾದಕದ್ರವ್ಯ ವಿರೋಧಿ ಹೋರಾಟದಲ್ಲಿ ಕೈಜೋಡಿಸಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.