ADVERTISEMENT

ಮಣಿಪುರದಲ್ಲಿ ಸ್ಟಾರ್‌ಲಿಂಕ್ ಡಿವೈಸ್ ಪತ್ತೆ; ಆರೋಪ ನಿರಾಕರಿಸಿದ ಇಲಾನ್ ಮಸ್ಕ್

ಪಿಟಿಐ
Published 18 ಡಿಸೆಂಬರ್ 2024, 5:16 IST
Last Updated 18 ಡಿಸೆಂಬರ್ 2024, 5:16 IST
<div class="paragraphs"><p>ಇಲಾನ್ ಮಸ್ಕ್ (ಬಲಬದಿ)</p></div>

ಇಲಾನ್ ಮಸ್ಕ್ (ಬಲಬದಿ)

   

ಚಿತ್ರ ಕೃಪೆ: (X/@Spearcorps)

ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸ್ಟಾರ್‌ಲಿಂಕ್ ಡಿವೈಸ್ ಬಳಕೆ ಮಾಡಲಾಗಿದೆ ಎಂಬ ಆರೋಪಗಳನ್ನು ಉದ್ಯಮಿ, ಸ್ಪೇಸ್ ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ನಿರಾಕರಿಸಿದ್ದಾರೆ.

ADVERTISEMENT

ಇತ್ತೀಚೆಗೆ ಇಂಫಾಲ್ ಪೂರ್ವ ಜಿಲ್ಲೆಯ ಕೆರಾವೊ ಕುನೌ ಪ್ರದೇಶದಲ್ಲಿ ದಾಳಿ ನಡೆಸಿದ್ದ ಭದ್ರತಾ ಪಡೆ, ಶಸ್ತ್ರಾಸ್ತ್ರ, ಮದ್ದುಗುಂಡುಗಳ ಜತೆ ಕೆಲವು ಇಂಟರ್‌ನೆಟ್ ಉಪಕರಣಗಳನ್ನು ವಶಪಡಿಸಿಕೊಂಡಿತ್ತು.

ವಶಪಡಿಸಿಕೊಂಡ ವಸ್ತುಗಳನ್ನು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿತ್ತು. ಈ ಪೈಕಿ ಒಂದು ಡಿವೈಸ್‌ನಲ್ಲಿ ಸ್ಟಾರ್ ಲಿಂಕ್ ಲೋಗೋ ಇರುವುದನ್ನು ಬಳಕೆದಾರರೊಬ್ಬರು ಪತ್ತೆ ಹಚ್ಚಿದ್ದರು.

ಈ ಕುರಿತು ಪೋಸ್ಟ್ ಮಾಡಿದ್ದ ಬಳಕೆದಾರ, 'ಭಯೋತ್ಪಾದಕರು ಸ್ಟಾರ್ ಲಿಂಕ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇದರತ್ತ ಇಲಾನ್ ಮಸ್ಕ್ ಗಮನ ಹರಿಸಿ ತಂತ್ರಜ್ಞಾನದ ದುರುಪಯೋಗವನ್ನು ತಡೆಯುತ್ತಾರೆ ಎಂದು ನಿರೀಕ್ಷಿಸುತ್ತೇನೆ' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಲಾನ್ ಮಸ್ಕ್, 'ಇದು ಸುಳ್ಳು. ಸ್ಟಾರ್‌ಲಿಂಕ್ ಉಪಗ್ರಹ ಭಾರತದಲ್ಲಿ ಆಫ್ ಮಾಡಲಾಗಿದೆ' ಎಂದು ಹೇಳಿದ್ದಾರೆ.

ರಾಜ್ಯ ಪೊಲೀಸರ ಪ್ರಕಾರ, ಇಂಟರ್‌ನೆಟ್ ಸ್ಯಾಟಲೈಟ್ ಆ್ಯಂಟಿನಾ, ಇಂಟರ್‌ನೆಟ್ ಸ್ಯಾಟಲೈಟ್ ರೂಟರ್ ಮತ್ತು ಅಂದಾಜು 20 ಮೀಟರ್‌ನ ಎಫ್‌ಟಿಪಿ ಕೇಬಲ್ ವಶಪಡಿಸಿಕೊಳ್ಳಲಾಗಿತ್ತು.

ಉಪಗ್ರಹ ಆಧಾರಿತ ಅಂತರ್ಜಾಲ ಸೇವೆ ಒದಗಿಸುತ್ತಿರುವ ಇಲಾನ್ ಎಸ್ಕ್ ಅವರ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಈವರೆಗೆ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.