ADVERTISEMENT

ಭಾರತ ಸೇರಿ ಇತರೆ ಮೂರು ರಾಷ್ಟ್ರಗಳ ವಿಮಾನ ಪ್ರಯಾಣಕ್ಕೆ ಸೌದಿ ಅರೇಬಿಯಾ ನಿರ್ಬಂಧ

ಪಿಟಿಐ
Published 23 ಸೆಪ್ಟೆಂಬರ್ 2020, 12:30 IST
Last Updated 23 ಸೆಪ್ಟೆಂಬರ್ 2020, 12:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇರುವುದರಿಂದ ಭಾರತ ಮತ್ತು ವಿವಿಧ ದೇಶಗಳಿಂದ ಬರುವ ಮತ್ತು ಹೋಗುವ ವಿಮಾನಗಳ ಹಾರಾಟವನ್ನು ಸೌದಿ ಅರೇಬಿಯಾ ನಿರ್ಬಂಧಿಸಿದೆ.

ಈ ಸಂಬಂಧಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರವು (ಜಿಎಸಿಎ) ಆದೇಶ ಹೊರಡಿಸಿದ್ದು, ‘ಭಾರತದ ಜತೆಗೆ ಬ್ರೆಜಿಲ್ ಮತ್ತು ಅರ್ಜೆಂಟೈನಾ ದೇಶಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ. ಸೌದಿಗೆ ಆಗಮಿಸುವ 14 ದಿನಗಳ ಮುಂಚಿತವಾಗಿ ಪ್ರಸ್ತಾವನೆಯನ್ನು ನೀಡಿರುವ ಯಾವುದೇ ವ್ಯಕ್ತಿಗೂ ಇದು ಅನ್ವಯಿಸುತ್ತದೆ’ ಎಂದು ಅದು ತಿಳಿಸಿದೆ.

ಸೌದಿ ಅರೇಬಿಯಾದ ಎಲ್ಲ ವಿಮಾನ ನಿಲ್ದಾಣಗಳ ವಿಮಾನ ಸಂಸ್ಥೆಗಳಿಗೂ ಇದರ ಮಾಹಿತಿ ನೀಡಲಾಗಿದೆ. ಈ ಮೂರೂ ದೇಶಗಳಿಂದ ಅಧಿಕೃತ ಸರ್ಕಾರಿ ಆಮಂತ್ರಣ ಹೊಂದಿರುವವರಿಗೆ ಮಾತ್ರವೇ ಸೌದಿಗೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಈ ವರ್ಷದ ಮಾರ್ಚ್ 23ರವರೆಗೆ ಅಂತರರಾಷ್ಟ್ರೀಯ ವಿಮಾನಸಂಚಾರವನ್ನು ನಿಷೇಧಿಸಲಾಗಿತ್ತು. ವಿವಿಧ ದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮೇ 6ರಿಂದ ಸೌದಿ ಅರೇಬಿಯಾ ಮತ್ತು ಭಾರತದ ನಡುವೆ ವಿಮಾನ ಹಾರಾಟ ಪ್ರಾರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.