
ಅಂಡಮಾನ್‌ನಲ್ಲಿ ನಿರ್ಮಾಣಗೊಂಡಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರು ಪ‍್ರತಿಮೆಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಲೋಕಾರ್ಪಣೆಗೊಳಿಸಿದರು
– ಪಿಟಿಐ ಚಿತ್ರ
ಶ್ರೀವಿಜಯಪುರ: ದೇಶದಲ್ಲಿ ಅಸ್ಪ್ರಶ್ಯತೆ ನಿರ್ಮೂಲನೆಗೆ ಶ್ರಮಿಸಿದ ವಿನಾಯಕ ದಾಮೋದರ್ ಸಾವರ್ಕರ್‌ಗೆ ಸೂಕ್ತ ಗೌರವ ಸಿಗಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದರು.
ಸಾವರ್ಕರ್ ಅವರ ‘ಸಾಗರ ಪ್ರಾಣ ತಲಮಲ’ ಗೀತೆಯ 115ನೇ ವರ್ಷಾಚರಣೆ ಅಂಗವಾಗಿ ಅಂಡಮಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಸಮಾಜದಲ್ಲಿದ್ದ ಕೆಟ್ಟ ಆಚರಣೆಗಳ ವಿರುದ್ಧ ಧೈರ್ಯದಿಂದ ಹೋರಾಡಿದರೂ, ಸಮುದಾಯದ ವಿರೋಧದ ನಡುವೆಯೂ ಪ್ರಗತಿಯ ಕಡೆ ಹೆಜ್ಜೆ ಹಾಕಿದ್ದರು’ ಎಂದು ಹೇಳಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿಗೆ ಬಂದವರನ್ನು ಅವರ ಮನೆಯವರು ಮರೆತು ಬಿಡುತ್ತಿದ್ದರು. ಇಲ್ಲಿಗೆ ಕೈದಿಗಳಾಗಿ ಬಂದವರು ಮರಳಿ ಹೋಗುತ್ತಿರಲಿಲ್ಲ. ಸಾವರ್ಕರ್ ಇಲ್ಲಿ ಜೈಲುವಾಸ ಅನುಭವಿಸಿದ ಕಾರಣಕ್ಕೆ ಈ ಸ್ಥಳ ಭಾರತೀಯರ ಪಾಲಿಗೆ ಪುಣ್ಯ ಸ್ಥಳವಾಗಿದೆ’ ಎಂದು ಹೇಳಿದರು.
ಸಾವರ್ಕರ್ ಪ್ರತಿಮೆ ಲೋಕಾರ್ಪಣೆ
ಅಂಡಮಾನ್–ನಿಕೋಬಾರ್ ದ್ವೀಪದಲ್ಲಿ ನಿರ್ಮಾಣಗೊಂಡಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರು ಪ‍್ರತಿಮೆಯನ್ನು ಕೇಂದ್ ಗೃಹ ಸಚಿವ ಅಮಿತ್ ಶಾ ಮತ್ತು ಆರ್‌ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಶುಕ್ರವಾರ ಅನಾವರಣಗೊಳಿಸಿದ್ದಾರೆ.
ಪ್ರತಿಮೆ ಅನಾವರಣದ ಬಳಿಕ ಅದೇ ಉದ್ಯಾನದಲ್ಲಿ ಅಮಿತ್ ಶಾ ಮತ್ತು ಭಾಗವತ್ ಅವರು ರುದ್ರಾಕ್ಷಿ ಗಿಡಗಳನ್ನು ನೆಟ್ಟರು. ಬಳಿಕ ಶ್ರೀವಿಜಯಪುರಂನಲ್ಲಿರುವ ಬಿ.ಆರ್ ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯದಲ್ಲಿ ಸಾವರ್ಕರ್ ಕುರಿತ ಗೀತೆಯನ್ನು ಬಿಡುಗಡೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.