ADVERTISEMENT

ವೈದ್ಯ ಸೀಟುಗಳಲ್ಲಿ ಒಬಿಸಿ ಮೀಸಲಾತಿಗಾಗಿ ಮದ್ರಾಸ್‌ ಕೋರ್ಟ್‌ಗೆ ಹೋಗಿ: ಸುಪ್ರೀಂ

ಪಿಟಿಐ
Published 11 ಜೂನ್ 2020, 9:48 IST
Last Updated 11 ಜೂನ್ 2020, 9:48 IST
   

ನವದೆಹಲಿ: ತಮಿಳುನಾಡು ಪಾಲಿನ ಅಖಿಲ ಭಾರತ ಕೋಟಾದ ವೈದ್ಯ ಸೀಟುಗಳಲ್ಲಿ ಒಬಿಸಿ ಮೀಸಲಾತಿ ಜಾರಿಗೊಳಿಸದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಿವಿಧ ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿತು.

2020–21ನೇ ಶೈಕ್ಷಣಿಕ ವರ್ಷದಲ್ಲಿ ಪದವಿ, ಸ್ನಾತಕೋತ್ತರ ಪದವಿಯ ವೈದ್ಯ, ದಂತ ವೈದ್ಯ ಕೋರ್ಸ್‌ಗಳ ರಾಜ್ಯವು ಸರೆಂಡರ್‌ ಮಾಡಿದ್ದ ಸೀಟುಗಳಿಗೆ ತಮಿಳುನಾಡು ಕಾಯ್ದೆ ಅನುಸಾರ ಒಬಿಸಿ ಮೀಸಲಾತಿ ಜಾರಿಗೊಳಿಸದಿರಲು ಕೇಂದ್ರ ನಿರ್ಧರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಎಲ್‌.ನಾಗೇಶ್ವರರಾವ್‌, ಕೃಷ್ಣ ಮುರಾರಿ ಮತ್ತು ಎಸ್‌.ರವೀಂದ್ರ ಭಟ್‌ ಅವರಿದ್ದ ಪೀಠವು ಅರ್ಜಿದಾರರಾದ ದ್ರಾವಿಡ ಮುನ್ನೇತ್ರ ಕಜಗಂನ ವಕೀಲರು, ವೈಕೊ, ಅನ್ಬುಮಣಿ ರಾಮದಾಸ್, ಸಿಪಿಎಂ ಮತ್ತು ತಮಿಳುನಾಡು ಕಾಂಗ್ರೆಸ್‌ ಸಮಿತಿಗೆ ಮೊದಲು ಈ ಸಂಬಂಧ ಮದ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಈ ಅರ್ಜಿಗಳನ್ನು ವಾಪಸು ಪಡೆಯಬೇಕು ಮತ್ತು ಮದ್ರಾಸ್‌ ಹೈಕೋರ್ಟ್ ಮನವಿ ಸಲ್ಲಿಸಬೇಕು ಎಂದು ಪೀಠ ಹೇಳಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.