ADVERTISEMENT

ಕಾಶ್ಮೀರದಲ್ಲಿ ಶಾಲೆಗಳು ಪುನರಾರಂಭ

ಪಿಟಿಐ
Published 1 ಮಾರ್ಚ್ 2021, 11:24 IST
Last Updated 1 ಮಾರ್ಚ್ 2021, 11:24 IST
ಶ್ರೀನಗರದಲ್ಲಿ ತರಗತಿಗಳು ಸೋಮವಾರ ಪುನರಾರಂಭವಾಗಿದ್ದು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಹಾಜರಾಗಿದ್ದರು
ಶ್ರೀನಗರದಲ್ಲಿ ತರಗತಿಗಳು ಸೋಮವಾರ ಪುನರಾರಂಭವಾಗಿದ್ದು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಹಾಜರಾಗಿದ್ದರು   

ಶ್ರೀನಗರ: ಕಾಶ್ಮೀರದಲ್ಲಿ ಸೋಮವಾರ ಶಾಲೆಗಳು ಪುನರಾರಂಭಗೊಂಡವು. ಕೊರೊನಾ ಪರಿಸ್ಥಿತಿ ಕಾರಣದಿಂದಾಗಿ ಕಳೆದ ಒಂದು ವರ್ಷದಿಂದ ಮುಂಜಾಗ್ರತೆ ಕ್ರಮವಾಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಮಾರ್ಚ್‌ 9, 2020ರ ನಂತರ ಇದೇ ಮೊದಲ ಬಾರಿಗೆ ತರಗತಿಗಳಿಗೆ ಹಾಜರಾದರು. ಪೋಷಕರಿಂದ ಸಮ್ಮತಿ ಪತ್ರ ಪಡೆದಿರುವ ವಿದ್ಯಾರ್ಥಿಗಳಿಗಷ್ಟೇ ಹಾಜರಾಗಲು ಅವಕಾಶ ನೀಡಲಾಗಿತ್ತು.

ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ‘ಆಕ್ಷೇಪಣೆಯಿಲ್ಲ’ ಪ‍ತ್ರ ಪಡೆದುಕೊಂಡಿದ್ದವು. ಕೋವಿಡ್‌ ಪರಿಣಾಮ ಯಾವುದೇ ಅಹಿತಕರ ಬೆಳವಣಿಗೆ ಸಂಭವಿಸಿದಲ್ಲಿ ಬರಬಹುದಾದ ಆಕ್ಷೇಪಗಳ ಕಾರಣದಿಂದ ಈ ಕ್ರಮ ವಹಿಸಲಾಗಿತ್ತು.

ADVERTISEMENT

‌ಅಲ್ಲದೆ, ತಮ್ಮ ಆರೋಗ್ಯ ಸ್ಥಿತಿ ಕುರಿತ ದೃಢೀಕರಣ ಪತ್ರವನ್ನು ತರುವಂತೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಸರ್ಕಾರದ ಆದೇಶದಂತೆ 6 ರಿಂದ 8ನೇ ತರಗತಿಗಳು ಮಾರ್ಚ್ 8ರಿಂದ, ಉಳಿದ ತರಗತಿಗಳು ಮಾರ್ಚ್ 18ರಿಂದ ಆರಂಭವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.