ADVERTISEMENT

ಮುಂಬೈ, ಕೋಲ್ಕತ್ತ ಮುಳುಗಡೆ?

ಸಮುದ್ರ ಮಟ್ಟ ಏರಿಕೆ: ಮಂಗಳೂರಿಗೂ ಅಪಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 19:31 IST
Last Updated 30 ಅಕ್ಟೋಬರ್ 2019, 19:31 IST
.
.   

ಸಮುದ್ರ ಮಟ್ಟದಲ್ಲಿನ ಏರಿಕೆಯಿಂದಾಗಿ 2050ರ ವೇಳೆಗೆ ಮುಂಬೈ ಮತ್ತು ಕೋಲ್ಕತ್ತ ಮುಳುಗಡೆಯಾಗುವ ಅಪಾಯವಿದೆ. ಮಂಗಳೂರಿನ ಕೆಲವು ಭಾಗಗಳೂ ನೀರಿನ ಅಡಿ ಸೇರಬಹುದು ಎಂಬ ಭೀತಿ ಇದೆ. ಭಾರತದಾದ್ಯಂತಸುಮಾರು 3.6 ಕೋಟಿ ಜನರು ನೆಲೆ ಕಳೆದುಕೊಳ್ಳಲಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಈ ಹಿಂದಿನ ಅಧ್ಯಯನಗಳು ಭಾರತದಲ್ಲಿ ಸುಮಾರು 50 ಲಕ್ಷ ಮಂದಿ ನೆಲೆ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಿದ್ದವು. ಈ ಹಿಂದಿನ ಅಂದಾಜಿಗಿಂತ ಐದು ಪಟ್ಟು ಹೆಚ್ಚು ಜನರು ನೆಲೆ ಕಳೆದುಕೊಳ್ಳಲಿದ್ದಾರೆ ಎಂದುಅಮೆರಿಕದ ‘ಕ್ಲೈಮೆಟ್‌ ಸೆಂಟ್ರಲ್‌’ ನಡೆಸಿರುವ ಅಧ್ಯಯನವು ಹೇಳಿದೆ

ವ್ಯತ್ಯಾಸಕ್ಕೆ ಕಾರಣಗಳು...

*ಈ ಹಿಂದಿನ ಅಧ್ಯಯನಗಳ ವೇಳೆ ನೆಲಮಟ್ಟವನ್ನು ಲೆಕ್ಕಹಾಕುವಲ್ಲಿ ಬಳಸಿದ ವಿಧಾನಗಳಲ್ಲಿ ನ್ಯೂನತೆ ಇತ್ತು

ADVERTISEMENT

*ಉಪಗ್ರಹಗಳ ಮೂಲಕ ಕಡಲ ತೀರದಲ್ಲಿನ ನೆಲಮಟ್ಟವನ್ನು ಲೆಕ್ಕಹಾಕುವಾಗ, ಮರ ಮತ್ತು ಮನೆಗಳ ಚಾವಣಿಯನ್ನೂ ನೆಲಮಟ್ಟವೆಂದು ಲೆಕ್ಕಹಾಕಲಾಗಿತ್ತು. ಹೀಗಾಗಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ತಪ್ಪಾಗಿ ಅಂದಾಜಿಸಲಾಗಿತ್ತು

*ಈಗ ನೆಲಮಟ್ಟವನ್ನು ಲೆಕ್ಕಹಾಕುವ ವಿಧಾನ ಹೆಚ್ಚು ನಿಖರವಾಗಿದೆ. ಹೀಗಾಗಿ ಮುಳುಗಡೆ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದೆ

*ಈ ಹಿಂದಿನ ಅಧ್ಯಯನಗಳ ವೇಳೆ ನೆಲಮಟ್ಟವನ್ನು ಲೆಕ್ಕಹಾಕುವಲ್ಲಿ ಬಳಸಿದ ವಿಧಾನಗಳಲ್ಲಿ ನ್ಯೂನತೆ ಇತ್ತು

*ಉಪಗ್ರಹಗಳ ಮೂಲಕ ಕಡಲ ತೀರದಲ್ಲಿನ ನೆಲಮಟ್ಟವನ್ನು ಲೆಕ್ಕಹಾಕುವಾಗ, ಮರ ಮತ್ತು ಮನೆಗಳ ಚಾವಣಿಯನ್ನೂ ನೆಲಮಟ್ಟವೆಂದು ಲೆಕ್ಕಹಾಕಲಾಗಿತ್ತು. ಹೀಗಾಗಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ತಪ್ಪಾಗಿ ಅಂದಾಜಿಸಲಾಗಿತ್ತು

* ಈಗ ನೆಲಮಟ್ಟವನ್ನು ಲೆಕ್ಕಹಾಕುವ ವಿಧಾನ ಹೆಚ್ಚು ನಿಖರವಾಗಿದೆ. ಹೀಗಾಗಿ ಮುಳುಗಡೆ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದೆ

ನೇತ್ರಾವತಿ ಅಳಿವೆ ಮುಳುಗಡೆ

ಸಮುದ್ರಮಟ್ಟದಲ್ಲಿ ಆಗುವ ಏರಿಕೆಯಿಂದ ಕರಾವಳಿ ನಗರ ಮಂಗಳೂರಿಗೂ ಅಪಾಯವಿದೆ. ಮಂಗಳೂರನ್ನು ಹಾದುಹೋಗುವ ನೇತ್ರಾವತಿ ಮತ್ತು ಗುರುಪುರ ನದಿಗಳ ಅಳಿವೆ ಪ್ರದೇಶದಲ್ಲಿ ಹಾಗೂ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆ ಆಗಲಿದೆ ಎಂದು ಅಧ್ಯಯನ ವರದಿ ಹೇಳಿದೆ.

-2020ರಲ್ಲಿ ಸಮುದ್ರದ ಉಬ್ಬರದ ಕಾರಣ ಉಂಟಾಗುವ ಪ್ರವಾಹದ ಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆ ಆಗಬಹುದು

-2030ರಲ್ಲಿ ಸಮುದ್ರದ ಉಬ್ಬರದ ಕಾರಣ ಉಂಟಾಗುವ ಪ್ರವಾಹದ ಮಟ್ಟದಲ್ಲಿ ಎರಡು ಅಡಿಯಷ್ಟು ಏರಿಕೆ ಆಗಬಹುದು

-ಈ ಪ್ರವಾಹದಿಂದ ಆಗುವ ನಷ್ಟದ ಪ್ರಮಾಣವು 600 ಪಟ್ಟು ಏರಿಕೆಯಾಗುವ ಅಪಾಯವಿದೆ ಎಂದು ಅಧ್ಯಯನ ವರದಿಯಲ್ಲಿ ಅಂದಾಜಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.